ಹರಿಹರ ಪಲ್ಲತ್ತಡ್ಕ: ಹರಿಹರೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಲೋಕಾರ್ಪಣೆ

0

ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ
ಶ್ರೀ ಹರಿಹರೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಲೋಕಾರ್ಪಣೆ ಫೆ. 20 ರಂದು ನಡೆಯಿತು.

ನಾಲ್ಕು ವರ್ಷಗಳ ಹಿಂದೆ ನೆರೆನೀರಿಗೆ ಹಳೆಯ ಕಾಣಿಕೆ ಹುಂಡಿ ಕೊಚ್ಚಿ ಹೋಗಿತ್ತು. ಇದೀಗ ಭಕ್ತರ ನೆರವಿನಿಂದ ಹೊಸದಾಗಿ ಕಾಣಿಕೆ ಹುಂಡಿ ನಿರ್ಮಾಣಗೊಳಿಸಲಾಗಿತ್ತು. ಲೋಕಾರ್ಪಣೆ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.