













ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ಉದ್ಯಮಿ ಉಗ್ರಾಣಿ ಅಬ್ದುಲ್ಲಾ (80 ವರ್ಷ) ಅವರು ಮಾ.12 ರಂದು ನಿಧನರಾದರು.
ಇವರು ಸುಳ್ಯದ ಹಳೆಯ ಕಾಲದ ವ್ಯಾಪಾರಿಗಳಲ್ಲಿ ಒರ್ವರಾಗಿದ್ದು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಕಳೆದ ಹಲವಾರು ದಶಕಗಳಿಂದ ಜನತಾ ಸ್ಟೋರ್ ಹಿಂಬಾಗದಲ್ಲಿ ಗೋಣಿ ಚೀಲ,ಡ್ರಮ್,ಇನ್ನಿತರ ಪ್ಲಾಸ್ಟಿಕ್ ಸಾಮಾಗ್ರಿಗಳ ವ್ಯಾಪಾರ ನಡೆಸುತ್ತಿದ್ದರು.
ಒಂದು ಕಾಲದಲ್ಲಿ ಸುಳ್ಯದಲ್ಲಿ ಸೀಮೆಎಣ್ಣೆ ವ್ಯಾಪಾರವನ್ನು ಇವರೇ ಮಾಡುತ್ತಿದ್ದರು.
ಮೃತರು ಪತ್ನಿ ಪುತ್ರರಾದ ಸುಳ್ಯ ಗಾಂಧಿನಗರದಲ್ಲಿರುವ ಮೆಟ್ರೋ ಪರ್ನಿಚರ್ಸ್ ಮಾಲಕ
ಸುಳ್ಳದ ಅಶ್ರಫ್ ,ರಥಬಿದಿಯಲ್ಲಿರುವ ಬೇಬಿ ಶಾಪ್ ಮಾಲಕ ಸಿರಾಜುದ್ದೀನ್, ಉದ್ಯಮಿ ನೌಫಾಲ್ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಮತ್ತು ನಮಾಜ್ ಮಧ್ಯಾಹ್ನ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ನಡೆಯಲಿದೆ.







