ಅತ್ಯಾಧುನಿಕ ತಂತ್ರಜ್ಞಾನದ ಹವಾ ನಿಯಂತ್ರಿತ ಅರೈಝ್ ಫಿಟ್ ಲ್ಯಾಬ್ ಜಿಮ್ ಸೆಂಟರ್ ಶುಭಾರಂಭ

0

ಆಧುನಿಕ ತಂತ್ರಜ್ಞಾನದ ಮಲ್ಟಿ ಜಿಮ್ ಸೆಂಟರ್ ತೆರೆದಿರುವುದು ನಗರಕ್ಕೆ ಕಳೆ ತಂದಿದೆ – ಅಕ್ಷಯ್ ಕೆ. ಸಿ

ದೈಹಿಕ ಮತ್ತು ಮಾನಸಿಕ ಒತ್ತಡ ನಿಯಂತ್ರಣಕ್ಕೆ ವ್ಯಾಯಾಮ ಅತೀ ಅವಶ್ಯಕ- ಡಾ. ಹರಪ್ರಸಾದ್

ಆಸಕ್ತಿಯ ಉದ್ಯಮದಲ್ಲಿ ಧೃತಿಗೆಡದೆ ಮುಂದುವರಿದರೆ ಯಶಸ್ಸು ಖಂಡಿತ- ಗುರುಪ್ರಸಾದ್ ರೈ.ಎಂ

ಸುಳ್ಯದರಥಬೀದಿಯಲ್ಲಿರುವ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಆಲೆಟ್ಟಿಯ ಮೊರಂಗಲ್ಲಿನ ಆಶಿಕ್ ರೈ ಎಂ. ಕೆ ಯವರ ಮಾಲಕತ್ವದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹವಾ ನಿಯಂತ್ರಿತ ಅರೈಝ್ ಫಿಟ್ ಲ್ಯಾಬ್ ಮಲ್ಟಿ ಜಿಮ್ ಸೆಂಟರ್ ಮಾ.25 ರಂದು ಶುಭಾರಂಭಗೊಂಡಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ ಯವರು ಜಿಮ್ ಸೆಂಟರನ್ನು ರಿಬ್ಬನ್ ಕತ್ತರಿಸಿ ಫೇಸ್ ಸ್ಕ್ಯಾನ್ ಮಾಡುವ ಮೂಲಕ ಉದ್ಘಾಟಿಸಿದರು.

ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ರವರು ದೀಪ ಪ್ರಜ್ವಲಿಸಿ ಶುಭ ಹಾರೈ ಸಿದರು.

ಮುಖ್ಯ ಅಭ್ಯಾಗತರಾಗಿ ಕೆ.ವಿ.ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ. ವಿ,
ಬೆಂಗಳೂರು ಸಹಕಾರಿ ನಗರ ಹೌಸಿಂಗ್ ಸೊಸೈಟಿಯ ಅಧ್ಯಕ್ಷರಾದ ಗುರುಪ್ರಸಾದ್ ರೈ ಮೊರಂಗಲ್ಲು, ಸುಳ್ಳ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಾಫ,
ಎಂ. ಬಿ. ಫೌಂಡೇಷನ್ಸ್ (ರಿ) ಸುಳ್ಯ ಇದರ ಅಧ್ಯಕ್ಷರಾದ ಲಯನ್ ಎಂ. ಬಿ. ಸದಾಶಿವ, ಎಕ್ಸ್ ಆರ್ಮ್ ಮಾರ್ಕೆಟಿಂಗ್ ಸೊಲ್ಯುಷನ್ ಬೆಂಗಳೂರು ಇದರ ಸಂಸ್ಥಾಪಕ ಪ್ರೀತಮ್ ಶೆಟ್ಟಿ ಮುಂಡಾಲಗುತ್ತು, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ರೊ. ಅಬ್ದುಲ್ ಹಮೀದ್ ಜನತಾ, ವರ್ತಕರ ಸಂಘದ ಗೌರವಾಧ್ಯಕ್ಷರಾದ ಪಿ. ಬಿ. ಸುಧಾಕರ ರೈ, ಶ್ರೀ ದೇವಿ ಕಾಂಪ್ಲೆಕ್ಸ್‌ ಮಾಲಕ ಕೆ. ಎಸ್. ಗೋಪಾಲಕೃಷ್ಣ ರವರು ಶುಭ ಹಾರೈಸಿದರು. ಮಾಲಕರ ತಾಯಿ ಶ್ರೀಮತಿ ಜ್ಯೋತಿ ರೈ ಮೊರಂಗಲ್ಲು, ಮೊರಂಗಲ್ಲು ಕುಟುಂಬದ ಯಜಮಾನರಾದ ಉಮೇಶ್ ಶೆಟ್ಟಿ ಹಾಗೂ ಕುಟುಂಬದ ಸದಸ್ಯರು, ಬಂಧು ಮಿತ್ರರು, ಮೊರಂಗಲ್ಲು ಪರಿಸರದವರು ಉಪಸ್ಥಿತರಿದ್ದರು.
ಶ್ರೀಮತಿ ಆಶಿತಾ ಪಿ ಶೆಟ್ಟಿ ಸ್ವಾಗತಿಸಿದರು. ಆಶಿಕ್ ರೈ ಎಂ. ಕೆ ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸುಸಜ್ಜಿತವಾದ ಕಾಂಪ್ಲೆಕ್ಸ್ ನಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಜಿಮ್ ಸಲಕರಣೆಗಳ ಜೋಡಣೆಯೊಂದಿಗೆ ವಿಶಾಲವಾದ ಪ್ರಶಾಂತ ಪರಿಸರದಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡುವ ವ್ಯವಸ್ಥೆಯೊಂದಿಗೆ ಫಿಟ್ ಲ್ಯಾಬ್ ಜಿಮ್ ಸೆಂಟರ್


ನ್ನು ಆರಂಭಿಸಲಾಗಿದೆ. ಯುವಕ, ಯುವತಿಯರಿಗೆ ಪ್ರತ್ಯೇಕ ತರಬೇತಿಯೊಂದಿಗೆ ಅವರ ಅನೂಕೂಲತೆಗೆ ತಕ್ಕಂತೆ ಸಮಯದ ಹೊಂದಾಣಿಕೆ ಮತ್ತು ಶುಭಾರಂಭದ ಪ್ರಯುಕ್ತ ವಿಶೇಷ ಪ್ಯಾಕೇಜ್ ನೊಂದಿಗೆ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಲಕರು ತಿಳಿಸಿದರು.