ಮನೋಜ್ ಬಾನಡ್ಕ ಆತ್ಮಹತ್ಯೆ

0

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಮತ್ತು ಬಚ್ಚನಾಯಕ ದೈವಸ್ಥಾನದಲ್ಲಿ ಹಲವು ವರ್ಷ ಮಾಗಣೆ ಗೌಡರಾಗಿ ಸೇವೆ ಸಲ್ಲಿಸಿದ್ದ ಯೇನೆಕಲ್ಲು ಗ್ರಾಮದ ಬಾನಡ್ಕ ದಿ. ಆನಂದ ಗೌಡರ ಪುತ್ರ ಮನೋಜ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಇವರಿಗೆ ಅಂದಾಜು ಸುಮಾರು 42 ವರ್ಷ ವಯಸ್ಸಾಗಿತ್ತು. ಇವರು ಮನೆಯ ಮೇಲ್ಛಾವಣಿಯ ಪಕ್ಕಾಸಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವುದಾಗಿ ತಿಳಿದುಬಂದಿದೆ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.