ಹಾಸನ ಕಡೆಯಿಂದ ಸುಳ್ಯ ಕಡೆಗೆ ಬೈಹುಲ್ಲು ಸಾಗಿಸುತ್ತಿದ್ದ ಪಿಕಪ್ ನ ಹೆಲ್ಪರ್ ಹಾಸನದ ಗಂಗಯ್ಯ ಎಂಬವರು ಐವರ್ನಾಡಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಾ.28 ರಂದು ನಡೆದಿದೆ.














ಹಾಸನ ಕಡೆಯಿಂದ ಬೈಹುಲ್ಲನ್ನು ಪಿಕಪ್ ನಲ್ಲಿ ತಂದು ಸುಬ್ರಹ್ಮಣ್ಯ,ಗುತ್ತಿಗಾರು,ಸೋಣಂಗೇರಿಯಲ್ಲಿ ಇಳಿಸಿ ಬಳಿಕ ಐವರ್ನಾಡು ಕಡೆಗೆ ಬರುವಾಗ ಹೆಲ್ಪರ್ ಕೆಲಸ ಮಾಡಿಕೊಂಡಿದ್ದ ಗಂಗಯ್ಯ ಎಂಬವರಿಗೆ ಹೃದಯಾಘಾತವಾಯಿತು.
ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅವರ ಊರಿನಿಂದ ಮನೆಯವರು ಬಂದ ಬಳಿಕ ಮಾ.30 ರಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೋಗಿರುವುದಾಗಿ ತಿಳಿದು ಬಂದಿದೆ.
ಇವರು ಹಾಸನ ಜಿಲ್ಲೆಯ ಸಿಂಗೋಡನಹಳ್ಳಿಯವರಾಗಿದ್ದು ಇವರಿಗೆ 58 ವರ್ಷ ಪ್ರಾಯವಾಗಿತ್ತು. ಇವರ ಪುತ್ರ ಮದುರವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







