ಕತ್ತಲುಮಯವಾಗಿರುವ ದುಗ್ಗಲಡ್ಕ ಪ್ರದೇಶ
ಕರೆಂಟ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ, ನೀರಿಗೂ ಅಭಾವ
ಯಾವಾಗ ಸರಿಯಾಗುವುದೋ ಎಂಬ ಆತಂಕ














ಮಾರ್ಚ್ 28 ರಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ದುಗ್ಗಲಡ್ಕ ಪ್ರದೇಶದಲ್ಲಿ ವಿಪರೀತ ನಷ್ಟ ಉಂಟಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. 3 ದಿವಸಗಳಿಂದ ವಿದ್ಯುತ್ ಇಲ್ಲದೆ ಜನರು ಕಂಗಾಲಾಗಿದ್ದಾರೆ.

ಎಸ್.ಎಸ್.ಎಲ್.ಸಿ.ಪರೀಕ್ಷಾ ಸಮಯವಾದುದರಿಂದ ಮಕ್ಕಳಿಗೆ ಓದಲು ತೀವ್ರ ಅನಾನುಕೂಲವಾಗಿದೆ. ಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು, ಇನ್ವರ್ಟರ್ ಗಳೂ ಖಾಲಿಯಾಗಿ ಯಾವಾಗ ಕರೆಂಟ್ ಬರುವುದೋ ಎಂದು ಕಾಯುವಂತಾಗಿದೆ.
ದುಗ್ಗಲಡ್ಕದ ಕೊಯಿಕುಳಿಯಲ್ಲಿ ಮೈನ್ ಲೈನ್ ಮೇಲೆ ಮರ ಬಿದ್ದು ವಯರ್ ಗಳು ರಸ್ತೆಯಲ್ಲೇ ಇದೆ.ಅದುವೇ ರಿಪೇರಿಯಾಗದೇ ಇರುವುದರಿಂದ ಮನೆ ಮನೆಗಳಿಗೆ ಸಂಪರ್ಕ ಕಲ್ಪಿಸುವ ಲೈನ್ ಯಾವಾಗ ದುರಸ್ತಿಯಾದೀತು ಎಂಬ ಆತಂಕ ಜನರನ್ನು ಕಾದಿದೆ.







