













ಕಲ್ಲುಗುಂಡಿ ರಾಮಕೃಷ್ಣ ಭಜನಾ ಮಂದಿರವು ಇನ್ನೆರಡು ತಿಂಗಳುಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಇದರ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಹಲವು ಮಂದಿ ಭಕ್ತಾದಿಗಳಿಂದ ಕ್ಷೇತ್ರಕ್ಕೆ ಧನಸಹಾಯ ಬರುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಇದರ ಬಗ್ಗೆ ಮನವಿ ನೀಡಲಾಗಿತ್ತು. ಇಂದು ಧರ್ಮಸ್ಥಳದಿಂದ ಒಂದೂವರೆ ಲಕ್ಷ ರೂ. ನೀಡುವುದಾಗಿ ಆದೇಶಪತ್ರವನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಮಾಧವ, ಸುಪರ್ವೈಸರ್ ಹರೀಶ್ರವರು ಭಜನಾ ಮಂದಿರದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಮಾಧವ ಪೇರಾಲ್, ಎಸ್.ಪಿ.ಲೋಕನಾಥ್, ಭಾರತಿ ಪುರುಷೋತ್ತಮ ಉಳುವಾರು, ಈಶ್ವರ ಆಚಾರ್ಯ, ಎಂ.ಎಸ್. ಭಟ್ ಸಂಪಾಜೆ, ರಾಮಚಂದ್ರ ಜಿ. ಮೊದಲಾದವರು ಉಪಸ್ಥಿತರಿದ್ದರು.









