ಕೊಡಿಯಾಲ ಪಂಚಾಯತ್ ಸ್ವಚ್ಛತಾ ಸಿಬ್ಬಂದಿಗಳಿಗೆ ಗುದ್ದಿದ ಕಾರು

0

ಇಬ್ಬರಿಗೆ ಗಾಯ ಆಸ್ಪತ್ರೆಗೆ ದಾಖಲು

ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ಪಂಚಾಯತ್ ಸ್ವಚ್ಛತಾ ಸಿಬ್ಬಂದಿಗಳಿಗೆ ಕಾರೊಂದು ಗುದ್ದಿ ಇಬ್ಬರು ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ.
ಕಲ್ಪಣೆಯಲ್ಲಿ ರಸ್ತೆ ಬದಿ ಸ್ವಚ್ಛತಾ ನಿರತರಾಗಿದ್ದ ಪಂಚಾಯತ್ ನ ಇಬ್ಬರು ಸ್ವಚ್ಛತಾ ಸಿಬ್ಬಂದಿಗಳಿಗೆ ರಸ್ತೆಯಲ್ಲಿ ಬಂದ ಕಾರು ಇವರಿಗೆ ಗುದ್ದಿ ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ವಿದ್ಯುತ್ ಕಂಬಕ್ಕೆ ಗುದ್ದಿತು.
ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಬುಡದಿಂದಲೇ ಮುರಿದು ಹೋಗಿದೆ.
ಗಾಯಗೊಂಡ ಸ್ವಚ್ಛತಾ ಸಿಬ್ಬಂದಿಗಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತೆಂದು ತಿಳಿದು ಬಂದಿದೆ.