ಹಿರಿಯ ವಿದ್ಯಾರ್ಥಿ & ಚಲನಚಿತ್ರ ನಟ ದೀಕ್ಷಿತ್ ಕುಂತೂರುರಿಂದ ಕಾರ್ಯಕ್ರಮ ಉದ್ಘಾಟನೆ
ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಪ್ರತಿಭಾ ಹಬ್ಬ ಕೆ.ಎಸ್.ಎಸ್ ಕಾಲೇಜಿನಲ್ಲಿ ಮೇ.8 ರಂದು ನಡೆಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಚಲನಚಿತ್ರ ನಟ ದೀಕ್ಷಿತ್ ಕುಂತೂರು ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕ ಡಾ.ವಿನ್ಯಾಸ್ ಹೊಸೋಳಿಕೆ, ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ನಾಯಕಿ ಚೈತನ್ಯ ಎನ್.ಎಸ್ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಆರತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಸಾಂಸ್ಕೃತಿಕ ಸಂಘದ ಸದಸ್ಯ ಭರತ್ ವಂದಿಸಿದರು. ಬಳಿಕ ಕಾಲೇಜಿನ ವಿವಿಧ ತರಗತಿಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.