ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಕಾರು, ಪ್ರಯಾಣಿಕರು ಅಪಾಯದಿಂದ ಪಾರು














ಮಾಣಿ ಮೈಸೂರು ಹೆದ್ದಾರಿ ಪೆರಾಜೆ ಸಮೀಪ ಕಾರಿನ ಚಾಲಕ ರಸ್ತೆಯಲ್ಲಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಘಟನೆ ಮೇ 26 ರಂದು ಮಧ್ಯಾಹ್ನ ಸಂಭವಿಸಿದೆ.
ಕಾರು ಚಾಲಕ ವಾಹನವನ್ನು ಅಡ್ಡಾದಿಟ್ಟಿಯಾಗಿ ಚಲಾಯಿಸುವುದನ್ನು ಹಿಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ವೀಡಿಯೋ ಮಾಡಿದ್ದು ಈ ಸಂದರ್ಭದಲ್ಲಿ ಕಾರಿನ ಹಿಂಬದಿಯಿಂದ ಬರುತ್ತಿದ್ದ ಟಿಟಿ ವಾಹನಕ್ಕೆ ಸೈಡ್ ನೀಡಲು ಹೋಗಿ ರಸ್ತೆ ಬದಿಯ ಮೋರಿಗೆ ಕಾರು ಡಿಕ್ಕಿ ಹೊಡೆದು ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ನಡುವಲ್ಲಿ ಬಂದು ನಿಂತಿದೆ. ಘಟನೆಯಿಂದ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು ಕಾರಿನ ಮುಂಭಾಗ ಟಿಟಿ ವಾಹನದ ಹಿಂಭಾಗಕ್ಕೆ ತಾಗಿದ ಕಾರಣ ಕಾರಿನ ಮುಂಭಾಗ ಜಖಂಗೊಂಡು ಟಿಟಿ ವಾಹನಕ್ಕೂ ಸ್ವಲ್ಪ ಜಖಂ ಆಗಿದೆ ಎಂದು ತಿಳಿದುಬಂದಿದೆ.
ಈ ಕಾರು ಯಾರದ್ದು ಎಂಬ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.







