ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬೆಳ್ಳಾರೆ – ಪೆರುವಾಜೆಯ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಾಲ ಸುಬ್ರಹ್ಮಣ್ಯ ಪಿ.ಎಸ್. ಗಿಡ ನೆಟ್ಟು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಮಾನವನ ಹೊಣೆಯಾಗಿದ್ದು ಎಲ್ಲರೂ ಪಾಲಿಸಬೇಕು ಮತ್ತು ಯುವ ಜನಾಂಗವು ಪರಿಸರ ಸಂರಕ್ಷಣೆಯ ಉಪಕ್ರಮಗಳನ್ನು ಹೆಚ್ಚೆಚ್ಚು ಅನುಸರಿಸುವ ಮೂಲಕ ಭೂಮಿಯ ಮೇಲಿನ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಬೋಧಕರು ಹಾಗೂ ಎನ್.ಎಸ್.ಎಸ್. ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸ್ವಯಂ ಸೇವಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.