













ಕೊಡಗು ಸಂಪಾಜೆ ಚೆಕ್ ಪೋಸ್ಟ್ ಬಳಿ ಐರಾವತ ಬಸ್ ಹಾಗೂ ಕಾರಿನ ನಡುವೆ ಅಪಘಾತವಾದ ಘಟನೆ ಜೂ.7 ರಂದು ನಡೆದಿದೆ.
ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆ .ಎಸ್ .ಆರ್.ಟಿ. ಸಿ ಐರಾವತ ಬಸ್ ಸಂಪಾಜೆ ಚೆಕ್ ಪೋಸ್ಟ್ ಬಳಿ ತಲುಪಿದಾಗ ಚಾಲಕ ಬ್ರೇಕ್ ಹಾಕಿದರಾದರೂ ಮಳೆಯ ಕಾರಣದಿಂದಾಗಿ ರಸ್ತೆ ಜಾರಲ್ಪಟ್ಟು ಬಸ್ ನಿಯಂತ್ರಣಕ್ಕೆ ಬಾರದೆ ಕೊಯನಾಡಿನ ಕಡೆ ಬರುತ್ತಿದ್ದ ಕಿಯಾ ಕಾರಿಗೆ ಡಿಕ್ಕಿ ಹೊಡೆದಿದೆ . ಪರಿಣಾಮವಾಗಿ ವಾಹನಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.







