ಅಲ್ ಬಿರ್ ಫ್ರೀ ಸ್ಕೂಲ್ ಮತ್ತು ಸುಳ್ಯ ಸಂಪಾಜೆ ಗ್ರಾಮದ ಮುಹಿದ್ಧೀನ್ ಜುಮಾ ಮಸೀದಿ ಪೇರಡ್ಕ ಪ್ರವಾಸೋದ್ಯಮ ಯಾತ್ರಿಭವನ ಉದ್ಘಾಟನೆ

0

ಪೇರಡ್ಕ ಗೂನಡ್ಕ ಮಸೀದಿ ಅಧೀನದಲ್ಲಿ ಅಲ್ ಬಿರ್ ಫ್ರೀ ಸ್ಕೂಲ್ ಮತ್ತು ಸುಳ್ಯ ಸಂಪಾಜೆ ಗ್ರಾಮದ ಮುಹಿದ್ಧೀನ್ ಜುಮಾ ಮಸೀದಿ ಪೇರಡ್ಕ ಪ್ರವಾಸೋದ್ಯಮ ಯಾತ್ರಿಭವನ ಉದ್ಘಾಟನೆ ಗೂನಡ್ಕ ಇದರ ಅಧೀನದಲ್ಲಿ ಪ್ರಾರಂಭಗೊಂಡ ಅಲ್ ಬಿರ್ರ್ ಪ್ರೀಸ್ಕೂಲ್ ಹಾಗೂ ಪ್ರವಾಸೋಧ್ಯಮ ಇಲಾಖೆಯ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಯಾತ್ರಿಭವದ ಉದ್ಘಾಟನೆಯು ಜೂ. 9 ರಂದು ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದಲ್ಲಿ ನಡೆಯಿತು. ಅಲ್ ಬಿರ್ರ್ ಪ್ರೀಸ್ಕೂಲ್ ಮತ್ತು ಯಾತ್ರಿಭವನವನ್ನು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಬಹು| ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಹಿದ್ಧೀನ್ ಜುಮಾ ಮಸೀದಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದ್ದರು.
ದುವಾವನ್ನು ಸಯ್ಯಿದ್ ಜಲಾಲುದ್ಧೀನ್ ತಂಙಳ್ ಕುನ್ನುಂಗೈ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಪೇರಡ್ಕ ಜುಮಾ ಮಸೀದಿ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ವಿವಿಧ ಜಮಾಅತ್ ಗಳ ಖತೀಬರು, ಅಧ್ಯಕ್ಷರುಗಳು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರುಗಳು ಭಾಗವಹಿಸಿದರು.