













ಸುಳ್ಯ ಜಟ್ಟಿಪಳ್ಳ ನಿವಾಸಿ , ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ ರವರ ಧರ್ಮಪತ್ನಿ ಶ್ರೀಮತಿ ಪ್ರೇಮಾರವರು ಅಸೌಖ್ಯದ ಕಾರಣದಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಜೂ.10 ರಂದು ನಿಧನರಾದರು.
ಅವರಿಗೆ 41 ವರ್ಷ ವಯಸ್ಸಾಗಿತ್ತು.
ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಇವರು ಇತ್ತೀಚಿನ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಜಟ್ಟಿಪಳ್ಳ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮೃತರು ಪತಿ ಸುಳ್ಯ ನ.ಪಂ.ಮಾಜಿ ಸದಸ್ಯರೂ ಆಗಿರುವ ನಾರಾಯಣ ಜಟ್ಟಿಪಳ್ಳ ಹಾಗೂ ಇಬ್ಬರು ಪುತ್ರಿಯರಾದ ಗ್ರೀಷ್ಮ ಮತ್ತು ಜಶ್ಮಿತಾ ರನ್ನು ಅವರು ಅಗಲಿದ್ದಾರೆ.







