ಸುಳ್ಯ ರೆಪ್ಕೋ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಡೆಪಾಸಿಟ್ ಅಭಿಯಾನ ಪ್ರಾರಂಭ

0

ಭಾರತ ಸರ್ಕಾರದ ಒಂದು ಉದ್ಯಮವಾಗಿರುವ ರೆಪ್ಕೋ ಬ್ಯಾಂಕ್ ಸುಳ್ಯ ಶಾಖೆಯಲ್ಲಿ ವಿಶೇಷ ಡೆಪಾಸಿಟ್ ಅಭಿಯಾನ ಆಯೋಜಿಸಲಾಗಿದೆ.
ಈ ಅಭಿಯಾನದಲ್ಲಿ ಹಿರಿಯ ನಾಗರಿಕರಿಗೆ ಆಕರ್ಷಕ 8.25% ಬಡ್ಡಿ ದರ ಸಾಮಾನ್ಯ ನಾಗರಿಕರಿಗೆ 7.75% ಬಡ್ಡಿದರ ವಿಧಿಸಲಾಗಿದೆ, ಮಹಿಳೆಯರಿಗಾಗಿ ವಿಶೇಷವಾದ ” ರೆಪ್ಕೊ ಮಹಿಳಾ . ” ಎಂಬ ವಿಶೇಷ ಡೆಪಾಸಿಟ್ ಯೋಜನೆ ಇದ್ದು ಅದಕ್ಕೆ 7.85% ಬಡ್ಡಿ ದರವನ್ನು ನೀಡಲಾಗುತ್ತಿದೆ.
ಈ ಅಭಿಯಾನವು ದಿನಾಂಕ : 10.06.2026 ರಿಂದ 31.07.2026 ವರೆಗೆ ಜಾರಿಯಲ್ಲಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ರೆಪ್ಕೋ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ರಾಜೇಶ್ ರವರು ತಿಳಿಸಿದ್ದಾರೆ.