ಲಯನ್ಸ್ ಪ್ರಾಂತಿಯ ಅಧ್ಯಕ್ಷರಾಗಿ ಸಂತೋಷ್ ಜಾಕೆ ನೇಮಕ

0

ಲಯನ್ಸ್ ಜಿಲ್ಲೆ 317 D ಯ ಪ್ರಾಂತ್ಯ 6 ರ 2026- 27 ನೇ ಸಾಲಿನ ಪ್ರಾಂತಿಯ ಅಧ್ಯಕ್ಷರಾಗಿ ಸಂತೋಷ್ ಜಾಕೆಯವರನ್ನು ಲಯನ್ಸ್ ಜಿಲ್ಲಾ ಗವರ್ನರ್ ತಾರಾನಾಥ್ ಹೆಚ್ ಎಮ್ ಕೊಪ್ಪ ನೇಮಕ ಮಾಡಿದ್ದಾರೆ.

ಪಂಜ, ಬೆಳ್ಳಾರೆ, ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಸಂಪಾಜೆ ಕಡಬ ಲಯನ್ಸ್ ಕ್ಲಬ್ ಗಳು ಇವರ ವ್ಯಾಪ್ತಿಗೆ ಬರಲಿದ್ದು, ಸಂತೋಷ ಜಾಕೆಯವರು ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಜಿಲ್ಲಾ ಸಂಪುಟ ಸದಸ್ಯರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು.

ಸಂತೋಷ್ ರವರು ಎಪಿಎಂಸಿ ಉಪಾಧ್ಯಕ್ಷರಾಗಿ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪಂಬೆತ್ತಾಡಿ ಸಹಕಾರಿ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿದ್ದರು.