ಅಧ್ಯಕ್ಷರಾಗಿ ರಾಜೇಶ್ ಮಾವಿನಕಟ್ಟೆ ಆಯ್ಕೆ















ಬ್ಲೆಸ್ಡ್ ಕುರಿಯಾಕೋಸ್ ವಿದ್ಯಾ ಸಂಸ್ಥೆ ಗುತ್ತಿಗಾರು ಇದರ. ಶಿಕ್ಷಕರಕ್ಷಕ ಸಂಘದ ನೂತನ ಸಮಿತಿ ರಚನೆ ಜೂ. 20 ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈಂಟ್ ಮೇರಿಸ್ ಚರ್ಚಿನ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಥಾಮಸ್ ಪಾರೆಕಟೆಲ್ ಭಾಗವಹಿಸಿ ಶುಭಹಾರೈಸಿದರು. ಶಾಲಾ ಮುಖ್ಯ ಗುರು ಸಿಸ್ಟರ್ ಟ್ರೀಸಾ ಜಾನ್ ನೇತೃತ್ವದಲ್ಲಿ ನೂತನ ಶಿಕ್ಷಕರಕ್ಷಕ ಸಂಘದ ರಚನೆ ಮತ್ತು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು . ಅಧ್ಯಕ್ಷರಾಗಿ ರಾಜೇಶ್ ಮಾವಿನಕಟ್ಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಜಾಕೆ, ಪದಾಧಿಕಾರಿಗಳಾಗಿ ಧ್ರುವ ಮುಂಡೋಡಿ, ವೆಂಕಟ್ರಮಣ ಕುಚ್ಚಾಲ, ಹಿರಣ್ಯ ದೇವಿಪ್ರಸಾದ್ ಚಿಕ್ಮುಳಿ, ಯಮಿತ ಪೂರ್ಣಚಂದ್ರ ಪೈಕ ಆಯ್ಕೆಗೊಂಡರು. ನೂತನ ಪದಾಧಿಕಾರಿಗಳನ್ನು ಸಹ ಶಿಕ್ಷಕಿ ಶಾಂತಕುಮಾರಿ ಸ್ವಾಗತಿಸಿ, ಜೋಸ್ನಾ ವಂದಿಸಿದರು.







