ಯೇನೆಕಲ್ಲು: ಬಸ್‌ ಹತ್ತಲೆಂದು ಬಂದಾಗ ಢಿಕ್ಕಿ ಹೊಡೆದು ಚೆನ್ನಪ್ಪ ಮುತ್ಲಾಜೆ ಮೃತ್ಯು

0

ಬಸ್‌ಗೆ ಹತ್ತಲೆಂದು ಓಡಿ ಬಂದ ಸಂದರ್ಭ ಆಯ ತಪ್ಪಿ ಬಸ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಚೆನ್ನಪ್ಪ ಗೌಡ ಎಂಬವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಏನೆಕಲ್‌ ನಿಂದ ವರದಿಯಾಗಿದೆ.

ಏನೆಕಲ್ಲು ಗ್ರಾಮದ
ಮುತ್ಲಾಜೆಯ ಚೆನ್ನಪ್ಪ ಗೌಡರು ಪಂಜಕ್ಕೆ ಹೋಗಲೆಂದು ಏನೆಕಲ್‌ನ ಬಸ್‌ಸ್ಟ್ಯಾಂಡ್‌ನ ಒಂದು ಬದಿಯಲ್ಲಿ ನಿಂತಿದ್ದರು. ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ಬಸ್ ಬಂದಾಗ ಬಸ್‌ಹತ್ತಲೆಂದು ಬಸ್‌ಸ್ಟ್ಯಾಂಡ್ ಕಡೆಗೆ ಓಡಿದಾಗ ಬಸ್ ಬಂದು ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಚೆನ್ನಪ್ಪರವರು ರಸ್ತೆಯ ಮಧ್ಯದಲ್ಲೇ ಬಿದ್ದು ಹೊರಳಾಡತೊಡಗಿದರು. ಬಸ್ ಸಂಪೂರ್ಣ ರಸ್ತೆಯಿಂದ ಇಳಿದು ಬದಿಗೆ ಸರಿಯಿತ್ತೆಂದು ತಿಳಿದು ಬಂದಿದೆ. ಕೂಡಲೇ ಅಲ್ಲಿ ಸೇರಿದ್ದವರು ಅಂಬ್ಯುಲೆನ್ಸ್ ಮೂಲಕ ಸುಬ್ರಹ್ಮಣ್ಯದ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಕಡಬಕ್ಕೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.