













ಹರಿಹರ ಪಳ್ಳತ್ತಡ್ಕ ಗ್ರಾಮದ ಹರಿಹರ-ಕಜ್ಜೋಡಿ-ಮುಳ್ಳುಬಾಗಿಲು ಮತ್ತು ಕರಂಗಲ್ಲು-ಕಟ್ಟ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಹಾಗೂ ವಿದ್ಯುತ್ ಲೈನ್ ಅಡಿಯಲ್ಲಿನ ಪೊದೆಗಳನ್ನು ಸವರುವ ಕಾರ್ಯ ಜು.22ರಂದು ಸ್ಥಳೀಯರಿಂದ ನಡೆಸಲಾಯಿತು.
ಮಳೆಗಾಲದ ಸಂದರ್ಭದಲ್ಲಿ ರಸ್ತೆಯ ತಿರುವುಗಳು ಸರಿಯಾಗಿ ಗೋಚರಿಸುವಂತೆ ಮತ್ತು ವಿದ್ಯುತ್ ಲೈನ್ ಗೆ ಮರಗಳ ಒಣ ಗೆಲ್ಲುಗಳು ಮುರಿದು ಬೀಳದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕಜ್ಜೋಡಿ, ಮುಳ್ಳುಬಾಗಿಲು, ಕರಂಗಲ್ಲು ಹಾಗೂ ಕಟ್ಟ ಭಾಗದ ಸ್ಥಳೀಯರು ಶ್ರಮದಾನದ ಮೂಲಕ ರಸ್ತೆ ಬದಿ ಹಾಗೂ ವಿದ್ಯುತ್ ಲೈನ್ ಪೊದೆಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ರಸ್ತೆ ದುರಸ್ತಿ ಕಾರ್ಯವನ್ನು ನಡೆಸಿದರು.







