ಸುಬ್ರಹ್ಮಣ್ಯ: ಅನಾರೋಗ್ಯದಿಂದ ಗದಗ ಮೂಲದ ಕೂಲಿ ಕಾರ್ಮಿಕ ಮೃತ್ಯು

0

ಸುಬ್ರಹ್ಮಣ್ಯ:ಜ್ವರ,ಹೊಟ್ಟೆನೋವು ಕಾರಣದಿಂದ ಗದಗ ಮೂಲದ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆ 2 ರಂದು ನಡೆದಿದೆ.

ಮೃತ ವ್ಯಕ್ತಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕನಕವಾಡ ಮೂಲದ ಹನುಮಂತಪ್ಪ (55) ಎಂಬವರಾಗಿದ್ದು ಕಡಬ ತಾಲೂಕಿನ ಯೆನೆಕಲ್ಲು ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಹನುಮಂತಪ್ಪ ಹಾಗೂ ಅವರ ಪತ್ನಿ ತಿಪ್ಪವ್ವ ಅವರು ಸುಮಾರು 1 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಸುಬ್ರಹ್ಮಣ್ಯ ಗ್ರಾಮದ ಭವಾನಿ ಶಂಕರ ಎಂಬವರ ಯೆನೆಕಲ್ಲು ಗ್ರಾಮದ ಮೇಲ್ಕಟ್ಟ ಎಂಬಲ್ಲಿರುವ ತೋಟದ ಮನೆಗೆ ಕೊಠಡಿ ಪಡೆದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಆಗಸ್ಟ್ 1 ರಂದು ಹನುಮಂತಪ್ಪ ಅವರಿಗೆ ದಿಢೀರ್ ಜ್ವರ ಕಾಣಿಸಿಕೊಂಡಿದ್ದರಿಂದ ಸುಬ್ರಹ್ಮಣ್ಯದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಕೊಠಡಿಗೆ ಮರಳಿದ್ದರು.

ಆದರೆ ರಾತ್ರಿ ವೇಳೆಗೆ ಜ್ವರ ತೀವ್ರಗೊಂಡಿದ್ದಲ್ಲದೆ, ಹೊಟ್ಟೆನೋವು, ಬೆನ್ನುನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 16/2026, ಕಲಂ: 194 BNSS ರಂತೆ ಶವಪರೀಕ್ಷೆ ಹಾಗೂ ತನಿಖೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.