ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಕಾರ್ಯಕ್ರಮ

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೌಖಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ತರಭೇತಿ ಶಿಬಿರದ ಭಾಗವಾಗಿ ದಂತ ಚಿಕಿತ್ಸೆಯಲ್ಲಿ “From Class Room to Clinic : Dream, Build, Practice, Succeed” ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಆ. 13 ರಂದು ಆಯೋಜಿಸಲಾಗಿತ್ತು.


ಸಂಪನ್ಮೂಲ ವ್ಯಕ್ತಿಗಳಾಗಿ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ಪ್ರೋಫೆಸರ್ ಡಾ. ಪುಷ್ಪರಾಜ ಶೆಟ್ಟಿ ರವರು ಭಾಗವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಅರಂಭಗೊಂಡಿತು. ಉಪಪ್ರಾಂಶುಪಾಲೆ ಹಾಗೂ ವಿಭಾಗ ಮುಖ್ಯಸ್ಥೆ ಡಾ. ಶೈಲ ಎಂ. ಪೈ ರವರು ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.


ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್‌ರವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿ ಶುಭಹಾರೈಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಇದರ ಕಮಿಟಿ ಬಿ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಮೌರ್ಯ ಆರ್ ಕುರುಂಜಿ ರವರು ಶುಭ ಹಾರೈಸಿದರು. ಆಡಳಿತಾಧಿಕಾರಿ ಬಿ.ಟಿ. ಮಾಧವರವರು ಉಪಸ್ಥಿತರಿದ್ದರು.


ಡಾ. ಅನಿತಾ ದಯಾಕರ್ ರವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಸುಪ್ರಿಯ ಹೆಚ್. ರವರು ನಿರ್ವಹಿಸಿದರು. ವಿಭಾಗ ಸಿಬ್ಬಂದಿ ಸಹಕರಿಸಿದರು.


ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ದಂತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.