ಸುಳ್ಯ ಪಯಸ್ವಿನಿ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಸುಳ್ಯ ತಾಲೂಕು ಪಯಸ್ವಿನಿ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ 80ನೇ ಸ್ವತಂತ್ರೋತ್ಸವ ಆಚರಣೆ ಬಾಳೆಮಕ್ಕಿ ಬಳಿ ನಡೆಯಿತು. ಸಂಘದ ಗೌರವಧ್ಯಕ್ಷರಾದ ಎಂ ಬಿ ಸದಾಶಿವ ರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷರಾದ ದೀಕ್ಷಿತ್ ಎಂ ಎಚ್ , ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಬೋಳುಬೈಲು, ಕೋಶಧಿಕಾರಿ ಗಣೇಶ ಐವರನಾಡು, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ, ಧ್ವಜಾರೋಹಣ ನೆರವೇರಿಸಿದ ವೆಂಕಟರಮಣ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಟಿ ವಿಶ್ವನಾಥ ಹಾಗೂ ನಿವೃತ ವೈದ್ಯಧಿಕಾರಿ ನಂದಕುಮಾರ್.
ಅತಿಥಿಗಳು ಮಾತನಾಡಿ ಶುಭ ಹಾರೈಸಿದರು.
ದಾಮೋದರ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು. ಯುವರಂಜನ್ ಪೆರಾಲು ಧನ್ಯವಾದ ಸಮರ್ಪಿಸಿದರು.ಸಿಹಿತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.