













ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಭವಾನಿ ಶಂಕರ ಎನ್ ಹಾಗೂ ಚೆಂಬು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಿರೀಶ್ ಕುಮಾರ್ ಹೊಸೂರು ಧ್ವಜಾರೋಹಣವನ್ನು ನೆರವೇರಿಸಿದರು . ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಗ್ರೌಂಡ್ ಡ್ಯಾನ್ಸ್ ನೆರವೇರಿತು. ಶಾಲಾ ಎಸ್ . ಡಿ.ಎಂ.ಸಿ ಉಪಾಧ್ಯಕ್ಷೆ ಮೋಹಿನಿ ಹೆಚ್ ಹೆಚ್ , ಶಾಲಾ ಶಿಕ್ಷಕರಾಗಿರುವಂತಹ ಕುಸುಮಾಕರ ಅಂಬೆಕಲ್ಲು ಮತ್ತು ರಶ್ಮಿ , ಶಾಲಾ ಅಡುಗೆ ಸಿಬ್ಬಂದಿಯವರಾದ ಮಂಜುಳಾ ಕೆದಂಬಾಡಿ ಶಾಲಾ ಎಸ್ . ಡಿ.ಎಂ. ಸಿ ಎಲ್ಲಾ ಸದಸ್ಯರು , ಶಾಲಾ ಪೋಷಕರು ಮತ್ತು ದಬ್ಬಡ್ಕ ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿ ಮತ್ತು ಅಂಗನವಾಡಿ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ವಿದ್ಯಾರ್ಥಿಗಳ ಪೋಷಕರು ಹಾಗೂ ಶ್ರೀರಾಮ ಯುವಕಮಂಡಲ ಡಬ್ಬಡ್ಕದ ಸದಸ್ಯರು ಉಪಸ್ಥಿತರಿದ್ದರು.







