













ಆಲೆಟ್ಟಿ ಗ್ರಾಮದ ಉದಯಗಿರಿ ಗುಂಡ್ಯ ಕುಟುಂಬದಯಜಮಾನರಾಗಿದ್ದ ದಿ.ಬೆಳ್ಯಪ್ಪ ಗೌಡ ರವರ ಪುತ್ರ ಚಿದಾನಂದ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಆ.16 ರಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಏರು ಪೇರಾದ್ದರಿಂದ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಅವಿವಾಹಿತ ರಾಗಿದ್ದು, ಸಹೋದರರಾದ ಮೇದಪ್ಪ ಗೌಡ ಗುಂಡ್ಯ, ಪದ್ಮಯ್ಯ ಗೌಡ ಗುಂಡ್ಯ, ಸಹೋದರಿಯರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಶೇಷಮ್ಮ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ ಹಲವಾರು ವರ್ಷಗಳಿಂದ (ದಯ) ಜೀಪು ಚಾಲಕರಾಗಿ ವೃತ್ತಿ ಮಾಡುತ್ತಿದ್ದುಸ್ಥಳೀಯವಾಗಿ ಗುರುತಿಸಿಕೊಂಡಿದ್ದರು.







