













ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕ್ಷೇತ್ರದಲ್ಲಿ ನಾಗರ ಪಂಚಮಿ ಆಚರಣೆ ಆಗಸ್ಟ್ 17ರಂದು ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ನಾಗನಕಟ್ಟೆಯಲ್ಲಿ ಪ್ರಧಾನ ಅರ್ಚಕರು ಮತ್ತು ಸಹಾಯಕ ಅರ್ಚಕರ ನೇತೃತ್ವದಲ್ಲಿ ಪೂಜೆ ಹವನಗಳು ನಡೆದು ಹಾಲು ಅಭಿಷೇಕ , ತಂಬಿಲ ಮತ್ತು ಎಳನೀರು ಅಭಿಷೇಕ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಆಡಳಿತ ವೃಂದದವರು, ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು








