













ಸೆಪ್ಟೆಂಬರ್ 18ರಂದು ಮಂಗಳೂರುನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಸಮಸ್ಯೆಯಾದ ಪರಿಸರ ಸೂಕ್ಷ್ಮ ವಲಯದ (ESA)7ನೇ ಕರಡು ಅಧಿಸೂಚನೆಯ ಕುರಿತು ಪ್ರಥಮವಾಗಿ ಚರ್ಚೆ ನಡೆಸಿ ಸಪೂರ್ಣವಾಗಿ ಕೈ ಬಿಡಬೇಕು. ಜನವಸತಿ ಪ್ರದೇಶಕ್ಕೂ ಪಶ್ಚಿಮ ಘಟ್ಟಕೂ ಗಡಿಗುರುತು ಮಾಡಿ, ೦(ಶೂನ್ಯ )ಬಫರ್ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಯವರಿಗೆ, ಸಹಾಯಕ ಆಯುಕ್ತರಿಗೆ, ಕಡಬ ತಹಶೀಲ್ದಾರರಿಗೆ ಪಂಚಾಯತ್ ಆಡಳಿತಾಧಿಕಾಯ ಮೂಲಕ ಸೆ. 16ರಂದು ಬಳ್ಪ ಮತ್ತು ಕೇನ್ಯ ಗ್ರಾಮಸ್ಥರು ಮನವಿ ನೀಡಿದರು.
ಈ ಸಂದರ್ಭದಲ್ಲಿ ಜಯರಾಮ ಆಲ್ಕಬೆ, ಶಶಿಧರ ಎಣ್ಣೆಮಜಲು, ಹೊನ್ನಪ್ಪ ಎಂರ್ಬಿಲ, ರಮಾನಂದ ಎಣ್ಣೆಮಜಲು,
ಪ್ರಖ್ಯಾತ್ ರೈ, ನವೀನ ಕುಂಜತ್ತಾಡಿ, ಮಹೇಶ್ ಸುಂತಾರು, ವಿಜಯ ಕುಮಾರ್ ಕಾಂಜಿ ಉಪಸ್ಥಿತರಿದ್ದರು.
ಅದೇ ರೀತಿ ಸೆ. 17ರಂದು ನಡೆಯುವ ವಿಶೇಷ ಗ್ರಾಮಸಭೆಗೆ ಬಳ್ಪ ಮತ್ತು ಕೇನ್ಯ ಗ್ರಾಮದ ಒಂದು ಮನೆಯಿಂದ ಒಬ್ಬರಾದರೂ ಕಡ್ಡಾಯವಾಗಿ ಬರಬೇಕೆಂದು ಗ್ರಾಮಸ್ಥರಲ್ಲಿ ವಿನಂತಿಸಿಕೊಂಡಿದ್ದಾರೆ.







