













ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಹಲವು ಮಂದಿ ಕೃಷಿಕರ ಕೃಷಿ ತೋಟಗಳಿಗೆ ಸೆ.23 ರಂದು ರಾತ್ರಿ ಆನೆಗಳು ದಾಳಿ ಮಾಡಿದ್ದು ಅಪಾರ ಕೃಷಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.
ಬೇಂಗಮಲೆ ಕಾಡಿನಿಂದ ಇಳಿದ ಆನೆಗಳು ಡಾಮರು ರಸ್ತೆಯನ್ನು ದಾಟಿ ಮಹಾಬಲ ಗುಂಪಕಲ್ ಮತ್ತು ಹತ್ತಿರದ ಮನೆಯವರ ಕೃಷಿ ತೋಟಗಳಿಗೆ ಹಾನಿ ಮಾಡಿದೆ.
ಬಾಳೆ,ಅಡಿಕೆ ಸಸಿ, ಕುಡಿಯುವ ನೀರಿನ ಪೈಪ್ ಗಳನ್ನು ಪುಡಿಗಟ್ಟಿದೆ.
ಕೆಲವು ದಿನಗಳ ಹಿಂದೆ ಬಾಲಕೃಷ್ಣ. ಸಿ.ಎಚ್.ಮತ್ತಿತರರ ಕೃಷಿ ತೋಟಕ್ಕೆ ಹಾನಿ ಮಾಡಿದೆ.
ಇತ್ತೀಚೆಗೆ ಆನೆಗಳು ಬೇಂಗಮಲೆಯಲ್ಲಿ ಬೀಡುಬಿಟ್ಟಿದ್ದು ನಿರಂತರ ಕೃಷಿ ತೋಟಗಳಿಗೆ ಹಾನಿ ಮಾಡುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ.







