ಹರಿಹರ ಪಲ್ಲತ್ತಡ್ಕ ಗ್ರಾ.ಪಂ ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ

0

ಹರಿಹರ ಗ್ರಾ.ಪಂ ನಲ್ಲಿ ಸೆ.24 ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಆಡಳಿತಾಧಿಕಾರಿ ಪಿ ಬಿ ಪೂವಯ್ಯರವರು ವಹಿಸಿದರು.
ವೇದಿಕೆಯಲ್ಲಿ ಉಪ ವಲಯಣ್ಯಾದಿಕಾರಿಗಳಾದ ಅಪೂರ್ವ ಅಚ್ರಪ್ಪಾಡಿ, ಸದಾಶಿವ, ಕೊಲ್ಲಮೊಗ್ರ ಹರಿಹರ ಪ್ರಾ.ಕೃ ಪ ಸಂಘದ ಅದ್ಯಕ್ಷರಾದ ಸೋಮಶೇಖರ ಕಟ್ಟೆಮನೆ, ಗ್ರಾಮ ಲೆಕ್ಕಾಧಿಕಾರಿ ಮದು,ಪಂಚಾಯತ್ ಕಾರ್ಯದರ್ಶಿ ಚಿದಾನಂದ, ಪಿಡಿಒ ಶ್ಯಾಮಪ್ರಸಾದ್ ಉಪಸ್ಥಿತರಿದ್ದರು.
ಪಿಡಿಒ ಶ್ಯಾಮ್ ಪ್ರಸಾದ್ ರವರು ಕರಡು ಪ್ರತಿಯ ವರದಿಯನ್ನು ಓದಿ ಸಬೆಗೆ ವಿವರಿಸಿದರು.
ಯೋಜನೆ ಕರಡು ಪ್ರತಿಯ ವಿರುದ್ದವಾಗಿ ಸಭೆಯಿಂದ ಆಕ್ಷೇಪಗಳು ವ್ಯಕ್ತವಾಯಿತು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಮಾಡಲು ಆಗ್ರಹ ಕೇಳಿಬಂತು.