ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಿಸಲಾಗುತ್ತಿರುವ ಕುರಿತು ಮಡಪ್ಪಾಡಿ ಗ್ರಾಮಸಭೆ

0

ಮಡಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಪ್ಪಾಡಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಒಳಪಡಿಸಲಾಗುತ್ತಿರುವ ಕುರಿತು ವಿಶೇಷ ಗ್ರಾಮಸಭೆಯು ಸೆ. 23ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಶ್ರೀಮತಿ ಗೀತಾ ವಹಿಸಿದ್ದರು.

ವೇದಿಕೆಯಲ್ಲಿ ಡಿವೈಆರ್ ಎಫ್ ಒ ಸಂತೋಷ್ ದಂಸೂರು, ಗ್ರಾಮ ಆಡಳಿತಾಧಿಕಾರಿ ಮಾರುತಿ ಕಾಂಬ್ಳೆ ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರಮುಖರಾದ ಮಿತ್ರದೇವ ಮಡಪ್ಪಾಡಿ, ಹೆಚ್. ಬಿ. ಜಯರಾಮ ಹಾಡಿಕಲ್ಲು, ಲೋಕಪ್ಪ ಶೀರಡ್ಕ, ಉಷಾ ಜಯರಾಮ, ಶಕುಂತಲಾ ಕೇವಳ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಸೇರಿದ್ದರು.