













ಪೆರಾಜೆ ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆಯುಸೆ. ೨೪ ರಂದು ಅಧ್ಯಕ್ಷ ರಾಕೇಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯನ್ನು ೫ ವರ್ಷದ ವರೆಗೆ ಮುಂದುವರಿಸಿ, ಅಧ್ಯಕ್ಷರಾಗಿ ರಾಕೇಶ್ ರೈ, ಉಪಾಧ್ಯಕ್ಷರಾಗಿ ಸುಮಾ ನಾಗರಾಜ್, ಕಾರ್ಯಧರ್ಶಿಯಾಗಿ ರಕ್ಷಿತ್ ಕೆ. ಪಿ, ಪ್ರೌಢ ಶಾಲಾ ಸಂಚಾಲಕರಾಗಿ ಮಹೇಶ್ಕುಮಾರ್, ಕೋಶಾಧಿಕಾರಿಯಾಗಿ ಮಂಜುನಾಥ್ ಭಟ್, ನಿರ್ದೇಶಕರುಗಳಾಗಿ ಎನ್. ಎ. ರಾಮಚಂದ್ರ, ಎನ್.ಎ. ಜ್ಞಾನೇಶ್ , ಶಕುಂತಳಾ ಯು ರೈ, ದೀಪಕ್ ನಾಗರಾಜ್, ಕವನ ಎಂ, ಪ್ರೇಮ್ ಸಾಗರ್, ಅರ್ಚನಾ ಜೋಷಿ ಅನುಷ್ ಎಚ್.ಆರ್.ರವರನ್ನು ಆಯ್ಕೆ ಮಾಡಲಾಯಿತು.
ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕರಾದ ನಾಗರಾಜ್ ಜಿ ಆರ್ ವಾಚಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಕೇಶ್ ರೈ ಯವರು ಮಾತನಾಡಿ, ಪ್ರೌಢಶಾಲೆಗೆ ಉಚಿತ ಶಿಕ್ಷಣ,ಉಚಿತ ನೋಟ್ ಪುಸ್ತಕ, ಉಚಿತ ಸಮವಸ್ತ್ರ, ಪಂಚವಟಿ ವಸತಿ ನಿಲಯ ದ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯನ್ನು ಪ್ರಣವ್ ಫೌಂಡೇಶನ್ ಸಹಯೋಗದಲ್ಲಿ ನೀಡುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಅನೇಕ ಕೆಲಸಗಳನ್ನು ಪೂರೈಸಿದ್ದು, ಇನ್ನು ಮುಂದೆ ಹಲವು ಯೋಜನೆಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಇಲಾಖಾ ಅನುಮತಿ ದೊರೆತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ೫ನೇ ತರಗತಿವರೆಗೆ ನಡೆಸುವುದೆಂದು ತೀರ್ಮಾನಿಸಿದ ವಿಷಯವನ್ನು ಸಭೆಗೆ ಮಂಡಿಸಿ ನಮಗೆ ಊರ ವಿದ್ಯಾಭಿಮಾನಿಗಳ ಸಹಕಾರ ವನ್ನು ಯಾಚಿಸಿದರು. ಸಭೆಯಲ್ಲಿ ಹಿಂದಿನ ಪದಾಧಿಕಾರಿಗಳು, ನಿರ್ದೇಶಕರುಗಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಚಂದ್ರ ಕುಂಬಳಚೇರಿ, ಪದಾಧಿಕಾರಿಗಳು, ಪೋಷಕ ಸಮಿತಿ ಅಧ್ಯಕ್ಷ ಜಯ ಪ್ರಕಾಶ್ ಸಮಿತಿ ಸದಸ್ಯರುಗಳು, ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಚಂದ್ರಮತಿ, ಮತ್ತು ಶ್ರೀಲತಾ ಪ್ರಾರ್ಥಿಸಿದರು ಮಹೇಶ್ ಕುಮಾರ್ ಸ್ವಾಗತಿಸಿದರು. ಕಚೇರಿ ಅಧಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.







