ಬೆಂಗಳೂರಿನ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

0

ಬೆಂಗಳೂರಿನ ಅಖಿಲ ಭಾರತ ಒಕ್ಕಲಿಗರ ಮಹಾ ಸಭಾ ಮತ್ತು ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ರಾಜ್ಯಮಟ್ಟದ ಒಕ್ಕಲಿಗ ಹಾಗೂ ಅದರ ಉಪಜಾತಿಗಳ ಸ್ನೇಹ ಮಿಲನ -ಅಭಿನಂದನೆ-ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ. 27 ರಂದು ಬೆಂಗಳೂರಿನಲ್ಲಿ ನಡೆದಿದ್ದು ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಸಹಕಾರಿ ಧುರೀಣ ಪಿ.ಸಿ.ಜಯರಾಮರರಿಗೆ ಒಕ್ಕಲಿಗ ಆದರ್ಶ ವ್ಯಕ್ತಿ ಪ್ರಶಸ್ತಿ, ಧಾರ್ಮಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಕಾಳಿಕಾಪ್ರಸಾದ್ ಮುಂಡೋಡಿ ಯವರಿಗೆ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ, ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿಯವರಿಗೆ ನಾಡಪ್ರಭು ಕೆಂಪೇ ಗೌಡ ಪ್ರಶಸ್ತಿ, ಸಮಾಜ ಸೇವೇಗಾಗಿ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಮತ್ತು ದಿನೇಶ್ ಹಾಲೆಮಜಲುರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ನಾಟಿವೈದ್ಯೆ ಶ್ರೀಮತಿ ಪುಷ್ಪಾ ದೇವಿದಾಸ್ ಬುಡ್ಲೆಗುತ್ತುರವರಿಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ, ಕ್ರೀಡಾಪಟು ಕುಸುಮಾ ಮುತ್ಲಾಜೆ ಮಹಿಳಾ ಶಕ್ತಿ ಸಾಧನಾ ಪ್ರಶಸ್ತಿ ನೀಡಿ ಅತಿಥಿಗಳು ಗೌರವಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ಶ್ರೀ ಡಾ. ನಂಜಾವದೂತ ಮಹಾಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಉಪ ಮುಖ್ಯಮಂತ್ರಿ ಅಶ್ವತ ನಾರಾಯಣ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.