















ಯಾದವ ಸಭಾ ಕರ್ನಾಟಕ (ರಿ.) ಕೇಂದ್ರ ಸಮಿತಿ ಮಂಗಳೂರು, ಯಾದವ ಸಭಾ ತಾಲೂಕು ಸಮಿತಿ ಸುಳ್ಯ, ತಾಲೂಕು ಯುವ ವೇದಿಕೆ, ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾಸಭೆ ಸೆ.27ರಂದು ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷರು ಕರುಣಾಕರ ಹಾಸ್ಪರೆ ವಹಿಸಿದರು. ವಿಶೇಷ ಆಹ್ವಾನಿತರಾಗಿ ಯಾದವ ಸಭಾ ಕೆಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ, ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಸುದಾಮ ಆಲೆಟ್ಟಿ, ಪ್ರದಾನ ಕಾರ್ಯದರ್ಶಿ ಸದಾನಂದ ಕಾವೂರು, ಉಪಾಧ್ಯಕ್ಷ ಕೊರಗಪ್ಪ ಮಾಸ್ತರ್, ಕಾರ್ಯದರ್ಶಿ ರಾಮಚಂದ್ರ ಕೇನಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಜಯ ಕೃಷ್ಣ ಕಾಯರ್ತೋಡಿ, ತಾಲೂಕು ಯುವ ವೇದಿಕೆ ಅಧ್ಯಕ್ಷೆ ಸಾವಿತ್ರಿ ರಾಮ್, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ಕರುಣಾಕರ ಕೇನಾಜೆ, ತಾಲೂಕು ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲು, ಪ್ರಕಾಶ ಕಣೆಮರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಸಮಿತಿಯ ವರದಿಯನ್ನು ಕೃಷ್ಣ ಬೆಟ್ಟ ವಾಚಿಸಿದರು. ಲೆಕ್ಕಪತ್ರವನ್ನು ಕರುಣಾಕರ ಕೇನಾಜೆ ಮಂಡಿಸಿದರು. ತಾಲೂಕು ಮಹಿಳಾ ವೇದಿಕೆಯ ವರದಿ ಮತ್ತು ಲೆಕ್ಕ ಪತ್ರವನ್ನು ತಾಲೂಕು ಮಹಿಳಾ ಸಮಿತಿ ಕಾರ್ಯದರ್ಶಿ ಚಂಚಲಾಕ್ಷಿ ಓದಿದರು. ಯುವ ವೇದಿಕೆಯ ವರದಿ ಮತ್ತು ಲೆಕ್ಕ ಪತ್ರವನ್ನು ತೀರ್ಥೇಶ್ ಯಾದವ್ ವಾಚಿಸಿದರು. ಸಲಹಾ ಸಮಿತಿ ಅಧ್ಯಕ್ಷ ಸುದಾಮ ಆಲೆಟ್ಟಿ, ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ, ಕಾರ್ಯದರ್ಶಿ ರಾಮಚಂದ್ರ ಕೇನಾಜೆ, ಕೇಂದ್ರ ಸಮಿತಿ ಉಪಾಧ್ಯಕ್ಷ ಕೊರಗಪ್ಪ ಮಾಸ್ತರ್, ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿ ಸದಾನಂದ ಕಾವೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಜಯ ಕೃಷ್ಣ ಕಾಯರ್ತೋಡಿ, ಯುವ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ರಾಮ್ ಸಭೆಯನ್ನು ಉದ್ದೇಶಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಯಾದವ ಸಮಾವೇಶದ ಕ್ರೀಡಾಕೂಟ ಮತ್ತು ಸಮಾವೇಶದ ಬಗ್ಗೆ ಚರ್ಚಿಸಲಾಯಿತು. ತಾಲೂಕು ಮಾಜಿ ಕಾರ್ಯದರ್ಶಿ ದಾಮೋದರ ಕೇನಾಜೆ, ಶಾರದಾ ರಾಮನ್ ಹಾಗೂ ಇನ್ನಿತರರು ಸೂಕ್ತ ಸಲಹೆ ಸೂಚನೆ ನೀಡಿದರು. ಕೊನೆಗೆ ಅಧ್ಯಕ್ಷತೆ ವಹಿಸಿದ್ದ ಕರುಣಾಕರ ಹಾಸ್ಪರೆಯವರು ತಾಲೂಕು ಸಮಿತಿಯ, ಯುವ ವೇದಿಕೆ, ಮಹಿಳಾ ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಯಾದವ ಸಭಾ ತಾಲೂಕು ಸಮಿತಿಗೆ ಸ್ವಂತ ನಿವೇಶನ ಪಡೆಯುವ ಬಗ್ಗೆ ಚರ್ಚಿಸಲಾಯಿತು. ಶಾರದ ರಾಮನ್ ಪ್ರಾರ್ಥಿಸಿ, ತಾಲೂಕು ಸಮಿತಿ ಉಪಾಧ್ಯಕ್ಷ ಪ್ರಕಾಶ ಕಣೆಮರಡ್ಕ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವಿನೋದ್ ಕೊಯಿಂಗಾಜೆ ವಂದಿಸಿದರು.







