















ಪೋಪ್ಯುಲರ್ ಎಜ್ಯುಕೇಶನ್ ಸೊಸೈಟಿ (ರಿ.) ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.27ರಂದು ಪೋಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾದ ಪಿ.ಬಿ. ದಿವಾಕರ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಗತ ಸಭೆಯ ವರದಿಯನ್ನು ಕಾರ್ಯದರ್ಶಿ ಎ ಅಬ್ದುಲ್ಲಾ ಮಂಡಿಸಿದರು. ವಾರ್ಷಿಕ ವರದಿಯನ್ನು ಸಂಚಾಲಕರಾದ ಎ.ಸಿ. ವಸಂತರವರು ವಾಚಿಸಿದರು. 2025-26 ನೇ ಸಾಲಿನ ಆಡಿಟ್ ವರದಿಯನ್ನು ಮತ್ತು 2026-27ನೇ ಸಾಲಿನ ಅಂದಾಜು ಬಜೆಟ್ ಅನ್ನು ಅಬ್ದುಲ್ಲಾ ಮಾಸ್ತರ್ ಮಂಡಿಸಿದರು. ಸಭೆಯ ಅಂಗೀಕಾರ ಪಡೆದುಕೊಂಡು 2025-26ನೇ ಸಾಲಿನ ಕಾರ್ಯಕಾರ ಸಮಿತಿಯ ಸದಸ್ಯರನ್ನು 2026-27ನೇ ಸಾಲಿಗೂ ಮುಂದುವರಿಸುವುದೆಂದು ನಿರ್ಣಯಿಸಲಾಯಿತು. ಮಹಾಸಭೆಯಲ್ಲಿ ಕಳೆದ 39 ವರ್ಷಗಳಿಂದ ಜವಾನರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಎನ್ ಚಂದ್ರಶೇಖರ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಮುಖ್ಯೋಪಾಧ್ಯಾಯ ಪಿ ಸೋಮಶೇಖರ ಇವರು ಚಂದ್ರಶೇಖರರ ಬಗ್ಗೆ ಅಭಿನಂದನ ಭಾಷಣವನ್ನು ಮಾಡಿದರು. ಎನ್ ಎಂ ಸಿ ಯ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ವಿ. ದಾಮೋದರ ಗೌಡ ಹಿತ ಚಿಂತಕರ ನೆಲೆಯಲ್ಲಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕೆ ಜತ್ತಪ್ಪ ಗೌಡ, ಕೋಶಾಧಿಕಾರಿ ಕೆ.ಯು. ಶಂಶುದ್ದೀನ್, ಪ್ರಾಂಶುಪಾಲರಾದ ಎಸ್ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುರೇಶ್ ವಾಗ್ಲೆ ಧನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.







