

ಮರ್ಕಂಜದಿಂದ ಸುಳ್ಯಕ್ಕೆ ಸಂಚಾರ ಮಾಡುವ ಗಣೇಶ್ ವ್ಯಾನ್ ಮಾಲಕ ಜಯಪ್ರಸಾದ್ ಕೊಯಿನಾಡು ರವರಿಗೆ ಬೆಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ನಿನ್ನೆ ಸಂಜೆ (ಸೆ. 29) ನಡೆಯಿತು.














ದೊಡ್ಡತೋಟ ಮರ್ಕಂಜ ರಸ್ತೆಯ ದೊಡ್ಡತೋಟದಿಂದ ಕೊರತ್ತೋಡಿ ಯವರೆಗೆ ಮರುಡಾಮರಿಕರಣ ಗೊಂಡು ಇದೇ ರಸ್ತೆಯ ಕೊರತ್ತೋಡಿಯಲ್ಲಿ 2 ಕಡೆ ಮತ್ತು ಚೆನ್ನಡ್ಕದಲ್ಲಿ 2 ಕಡೆ ಕಾಂಕ್ರೀಟ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಹೀಗಾಗಿ ಹೈದಂಗೂರು, ಬೊಳ್ಳಾಜೆ, ಕೊರತ್ತೋಡಿ, ಬೆಟ್ಟ ಕೊಡಪಾಲ, ಕಿಲರ್ಕಜೆ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ಸಾರ್ವಜನಿಕರಿಗೆ ಸುಳ್ಯ ಮತ್ತಿತರರ ಕಡೆಗಳಿಗೆ ಹೋಗಲು ಸಮಸ್ಯೆ ಯಾಗುತ್ತಿತ್ತು. ಇದನ್ನು ಮನಗಂಡ ಗಣೇಶ್ ವ್ಯಾನ್ ಮಾಲಕ ಜಯಪ್ರಸಾದ್ ಕೊಯಿನಾಡು ರವರು ತನ್ನ ವ್ಯಾನ್ ನ್ನು ಬೆಟ್ಟದಲ್ಲಿ ನಿಲ್ಲಿಸಿ ಅಲ್ಲಿಂದ ಚೆನ್ನಡ್ಕ-ಕಕ್ಕೆಬೆಟ್ಟು – ಕಂದಡ್ಕ ಮಾರ್ಗವಾಗಿ ಸುಳ್ಯಕ್ಕೆ ವ್ಯಾನ್ ಸಂಚಾರ ಮಾಡಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಹೀಗಾಗಿ
ಹೈದಂಗೂರು, ಬೊಳ್ಳಾಜೆ, ಕೊರತ್ತೋಡಿ, ಬೆಟ್ಟ ಕೊಡಪಾಲ ಭಾಗದವರು ಇಂದು ಸಂಜೆ ಜಯಪ್ರಸಾದ್ ರವನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಕೃಷಿಕರು, ಊರಿನ ಪ್ರಮುಖರು ಆದ ರವಿಪ್ರಕಾಶ್ ಕೊರತ್ತೋಡಿ ಸನ್ಮಾನಿಸಿದರು.
ಕೊಲ್ಲಮೊಗ್ರ ಕೆವಿಜಿ ಪ್ರೌಢಶಾಲೆಯ ಶಿಕ್ಷಕ ರಾಜೇಶ್ ರೆಂಜಾಳ ಅಭಿನಂದನೆ ಸಲ್ಲಿಸಿದರು.
ದಯಾನಂದ ಕೊರತ್ತೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರಮೇಶ್ ನಾಯ್ಕ ಹೈದಂಗೂರು ಮತ್ತು ಸತೀಶ್ ಅಡ್ಕಾರ್ ಸ್ಟೋರ್ ಬೆಟ್ಟ ಸಹಕರಿಸಿದರು.
ಈ ಸಂದರ್ಭದಲ್ಲಿ ಸತ್ಯೇಶ್ ಚಂದ್ರೋಡಿ, ಸುಬ್ರಹ್ಮಣ್ಯ ಪ್ರಸಾದ್ ಕೊಡಪಾಲ, ಸುಬ್ರಮಣ್ಯ ನಾಯಕ್ ಬೊಳ್ಳಾಜೆ, ಮೋಹನ ಸಿಡ್ಲುಕಜೆ, ದೇವಿಪ್ರಸಾದ್ ಚೆನ್ನಡ್ಕ, ರವಿಚಂದ್ರ ಕೊಡಪಾಲ, ವಾಸುದೇವ ಹೈದಂಗೂರು, ರಾಮಚಂದ್ರ ಬೆಟ್ಟ, ಉಪೇಂದ್ರ ಮಿತ್ತಡ್ಕ, ಗೋಪಾಲ ಮಣಿಯಣಿ ಕಿಲರ್ಕಜೆ, ಶ್ರೀಮತಿ ಹರಿಣಿ ರವಿಪ್ರಕಾಶ್, ಬೊಮ್ಮಣ್ಣ ಹೈದಂಗೂರು, ಚಂದ್ರಶೇಖರ ನಾಯ್ಕ ಹೈದಂಗೂರು, ದೀಪ್ತಿ ಹೈದಂಗೂರು, ಕುಸುಮಾವತಿ ಬೆಟ್ಟ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







