ಸೆ.30 ರಂದು ಕೊಲ್ಲಮೊಗ್ರು ಕೆ.ವಿ.ಜಿ ಅ.ಪ್ರೌ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಗೌಡ ಎನ್ ನಿವೃತ್ತಿ

0

ಕೆ.ವಿ.ಜಿ ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಗೌಡ ಎನ್ ಸೆ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಇವರು ಮೂಲತಃ ಕಡಬ ತಾಲೂಕಿನ ಬಲ್ಯದ ನೆಲ್ಲ ದವರು. ಪ್ರಸ್ತುತ ಕೊಲ್ಲಮೊಗ್ರು ನಿವಾಸಿಯಾಗಿರುವ ಇವರು ಒಟ್ಟು 38 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆವಿಜಿ ಪ್ರೌಢಶಾಲೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ತನ್ನ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಿ.ಪ್ರಾ.ಬಲ್ಯ ಇಲ್ಲಿ ಪಡೆದಿದ್ದು ಆರರಿಂದ ಏಳರ ವರೆಗೆ ಸ.ಹಿ.ಪ್ರಾ.ಶಾಲೆ ಪಡುಬೆಟ್ಟು ಇಲ್ಲಿ ಪಡೆದಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಕಡಬ ಪ್ರೌಢಶಾಲೆಯಲ್ಲಿ ಪಡೆದು ಅನಂತರಾಜ್ ಕಾಲೇಜು ಆಪ್ ಫಿಸಿಕಲ್ ಎಜ್ಯುಕೇಶನ್ ಮೂಡಬಿದ್ರೆ ಇಲ್ಲಿ ಸಿ.ಪಿ.ಎಡ್ ಶಿಕ್ಷಣ ಪಡೆದಿದ್ದಾರೆ. 1988 ರಲ್ಲಿ ಸ.ಹಿ.ಪ್ರಾ.ಶಾಲೆ ಹಳೆನೆರೆಂಕಿ ಯಲ್ಲಿ ವೃತ್ತಿ ಆರಂಭಿಸಿದ್ದು. 1990 ರಿಂದ ಕೊಲ್ಲಮೊಗ್ರು ಪ್ರೌಢಶಾಲೆಯಲ್ಲಿ ವೃತ್ತಿ ಆರಂಭಿಸಿದ್ದಾರೆ. 2012 ರಿಂದ ಸರ್ಕಾರದ
ಅನುದಾನಿತ ಶಿಕ್ಷಕರಾಗಿದ್ದಾರೆ.

ತಮ್ಮ ವೃತ್ತಿಯೊಂದಿಗೆ ಸ್ಕೌಟ್ ಹಿಮಾಲಯ ವುಡ್ ಬ್ಯಾಡ್ಜ್ ಪಡೆದಿದ್ದಾರೆ. ಸೇವಾ ದಳ, ಯೋಗ, ಕರಾಟೆ ತರಬೇತಿ ಪಡೆದವರಾಗಿದ್ದು. ವೃತ್ತಿ ಜೀವನದಲ್ಲಿ ಹಲವಾರು ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯ ,ರಾಷ್ಟ್ರೀಯ ಕ್ರೀಡಾ ಸಾಧನೆ ಮೆರೆಯುವಂತೆ ಮಾಡಿದ್ದಾರೆ.‌2023 ರಲ್ಲಿ ಉತ್ತಮ ಸ್ಕೌಟ್ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.

ಇವರು ಬಲ್ಯ ಗ್ರಾಮದ ನೆಲ್ಲ ಬಾಬು ಗೌಡ ಮತ್ತು ಮಾಯಿಲಮ್ಮ ದಂಪತಿಗಳ ಪುತ್ರ. ಪತ್ನಿ ಶಾರದಾ ಜಿ ಬೆಂಡೋಡಿ ಕಿ.ಪ್ರಾ.ಶಾಲೆಯಲ್ಲಿ ಅತಿಥಿ ಶಿಕ್ಷಕಿ. ಪುತ್ರಿಯರಾದ ನಿಧಿ ಎನ್ ‌ಬಿ ಕೆವಿ ಜಿ ಇಂಜಿನಿಯರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತಿದ್ದಾರೆ. ನಿತಿ ಎನ್.ಬಿ ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ಬಿ.ಕಾಂ ನೊಂದಿಗೆ ಸಿ.ಎ ಓದುತಿದ್ದಾರೆ.ನಿಶಿ ಎನ್.ಬಿ ಗುತ್ತಿಗಾರಿನ ಕುರಿಯಾಕೋಸ್ ನ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ.