













ಮರ್ಕಂಜ ಗ್ರಾಮದ ಸೇವಾಜೆ ದಿ. ಕುಶಾಲಪ್ಪ ಗೌಡ ರವರ ಪುತ್ರ ವ್ಯಾನ್ ಮಾಲಕ ಮತ್ತು ಚಾಲಕರಾಗಿದ್ದ ಹರೀಶ್ ಸೇವಾಜೆ ಯವರು ಅಸೌಖ್ಯದಿಂದ ನಿನ್ನೆ ಸಂಜೆ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ದಮಯಂತಿ, ಪತ್ನಿ ಸವಿತಾ, ಪುತ್ರರಾದ ಸಂಪತ್, ಹೇಮಂತ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಹರೇಶ್ ಅವರು ಹಲವು ಸಮಯ ಸುಳ್ಯದಿಂದ ಮಡಪ್ಪಾಡಿಗೆ ವ್ಯಾನ್ ಸಂಚಾರ ನಡೆಸುತ್ತಿದ್ದರು.







