













ಸುಳ್ಯ ಕನಕಮಜಲು ಪರಿಸರದಲ್ಲಿ ಕುಟುಂಬದ ಸದಸ್ಯರ ನಡುವೆ ನಡೆದಿದ್ದ ಹೊಡೆದಾಟದ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಕನಕಮಜಲು ನಿವಾಸಿ ಸುರೇಂದ್ರ ಎಂಬಾತ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು ಸುಳ್ಯ ಠಾಣಾ ಸಿಬ್ಬಂದಿಗಳಾದ ರಾಜು ನಾಯ್ಕ ಡಿ ಹಾಗೂ ಸೋಮಯ್ಯ ಹಿರೇಮಠ ರವರು ಆರೋಪಿಯನ್ನು ಆಲೆಟ್ಟಿ ಬಳಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.







