ಅ.11ರಿಂದ ಅ.20: ಕಾಯರ್ತೋಡಿಯ ವರದಾಯಿನಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮತ್ತು ವಿಜಯದಶಮಿ ಮಹೋತ್ಸವ -ಶ್ರಮದಾನ

0

ಕಾಯರ್ತೋಡಿಯ ವರದಾಯಿನಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 23ನೇ ವರ್ಷದ ನವರಾತ್ರಿ ಮತ್ತು ವಿಜಯದಶಮಿ ಮಹೋತ್ಸವ ಅ.11 ರಿಂದ ಅ.20ರವರೆಗೆ ನಡೆಯಲಿದೆ.


ಮಂಗಳೂರಿನ ಮರಕಡ ಶ್ರೀ ಯೋಗೀಶ್ವರೇಶ್ವರ ನರೇಂದ್ರನಾಥ ಸ್ವಾಮಿ, ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿವರ್ಯರ ಕೃಪಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಅ.11ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹವನ ನಡೆಯಲಿದ್ದು ಅ.11 ರಿಂದ 20ರವರೆಗೆ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದೆ.
ಅ.11 ರಿಂದ 19ರವರೆಗೆ ಸಂಜೆ 6.30 ಗಂಟೆಯಿಂದ ದೀಪಾರಾಧನೆ ನಡೆದು ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಶ್ರೀ ದುರ್ಗಾನಮಸ್ಕಾರ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಅ.14ರಂದು ಬೆಳಿಗ್ಗೆ 10ರಿಂದ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ, ವಿದ್ಯಾರಂಭ ಕಾರ್ಯಕ್ರಮ ನಡೆಯಲಿದ್ದು ಅಕ್ಷರಾಭ್ಯಾಸ ಮಾಡಿಸುವವರು ಬರುವಾಗ 1 ಕೆ.ಜಿ ಅಕ್ಕಿ, 1ತೆಂಗಿನಕಾಯಿ, 5 ವೀಳ್ಯದೆಲೆ, 1ಅಡಿಕೆ, 1ಅರಸಿನಕೊಂಬು ತರಬೇಕು.
ಅ.15ರಂದು ಬೆಳಿಗ್ಗೆ 10.30ರಿಂದ ಮಹಾಗುರು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಲಿದ್ದು ಈ ಪೂಜೆ ಮಾಡಿಸುವವರು ಸಮಯಕ್ಕೆ ಸರಿಯಾಗಿ ಹಾಜರಿರಬೇಕು.
ಅ.19 ರಂದು ಮಧ್ಯಾಹ್ನ ಮಹಾಪೂಜೆ ನಂತರ ವಾಹನಗಳಿಗೆ ವಾಹನ ಪೂಜೆ ನಡೆಯಲಿದ್ದು ವಾಹನ ಪೂಜೆ ಮಾಡಿಸುವವರು ಬರುವಾಗ ನಿಂಬೆಹಣ್ಣು, ತೆಂಗಿನಕಾಯಿ ತರಬೇಕು.
ಅ.20ರಂದು ಬೆಳಿಗ್ಗೆ 10.30ರಿಂದ ಭಜನಾ ಕಾರ್ಯಕ್ರಮ ನಡೆದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ವಿಜಯದಶಮಿ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ನವಾನ್ನ- ವಿಶೇಷ ಅನ್ನಪ್ರಸಾದ ವಿತರಣೆ ನಡೆಯಲಿರುವುದು. ಹಾಗೂ ಪ್ರತಿದಿನ ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಸಂಘ ಸಂಸ್ಥೆಗಳಿಂದ ಭಜನಾಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಸಂದರ್ಭ ನಡೆಯುವ ಸೇವೆ
ಮಧ್ಯಾಹ್ನ ಹೂವಿನ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ
ರಾತ್ರಿ ದುರ್ಗಾಪೂಜೆ, ಹೂವಿನ ಪೂಜೆ, ಮಹಾಪೂಜೆ

ಅ.4ರಂದು ಶ್ರಮಧಾನ
ಕಾಯರ್ತೋಡಿಯ ವರದಾಯಿನಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.11 ರಿಂದ ಅ.20ರವರೆಗೆ ನಡೆಯಲಿರುವ 23ನೇ ವರ್ಷದ ನವರಾತ್ರಿ ಮತ್ತು ವಿಜಯದಶಮಿ ಮಹೋತ್ಸವ ಹಿನ್ನೆಲೆ ದೇವಸ್ಥಾನದಲ್ಲಿ ಸ್ವಚ್ಛತ ಕಾರ್ಯಕ್ರಮವು ಅ.4ರಂದು ನಡೆಯಿತು.


ಈ ವೇಳೆ ಶ್ರೀ ದುರ್ಗಾಪರಮೇಶ್ವರೀ ಟ್ರಸ್ಟ್‌ನ ಅಧ್ಯಕ್ಷರು ಮತ್ತು ಸದಸ್ಯರು, ಅರ್ಚಕರು, ಉತ್ಸವ ಸಮಿತಿಯ ಅಧ್ಯಕ್ಚರು ಮತ್ತು ಪದಾಧಿಕಾರಿಗಳು, ಸದಸ್ಯರು, ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಸಂಘ ಸಂಸ್ಥೆಯವರು, ಊರಿನ ಭಕ್ತರು ಶ್ರಮಧಾನದಲ್ಲಿ ಪಾಲ್ಗೊಂಡರು.