ಅ.20,21 : ದರ್ಖಾಸ್ತು ಶ್ರೀ ಶಾರದಾಂಬಾ ಸೇವಾ ಸಮಿತಿ ವತಿಯಿಂದ ಶ್ರೀ ಶಾರದೋತ್ಸವ

0

ಬೆಳ್ಳಾರೆ ಗ್ರಾಮದ ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ 21 ನೇ ವರ್ಷದ ಶ್ರೀ ಶಾರದೋತ್ಸವವು ಅ.20 ಮತ್ತು ಅ.21 ರಂದು ದರ್ಖಾಸ್ತು ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ಕ್ಕೆ ಗಣಪತಿ ಹೋಮ,ಗಂಟೆ 9.00 ಶ್ರೀ ಶಾರದಾಂಬಾ ವಿಗ್ರಹ ಪ್ರತಿಷ್ಟಾಪನೆ,ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀ ಶಾರದಾಂಬಾ ಸೇವಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶಾರದಾಂಬಾ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಹೊನ್ನಪ್ಪ ದರ್ಖಾಸ್ತು ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00 ಕ್ಕೆ ವಾಹನ ಪೂಜೆ 2.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ನಂಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಗೌರವಾಧ್ಯಕ್ಷ ಸಾಂತಪ್ಪ ಗೌಡ ಕಲ್ಮಡ್ಕ,ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಲ ಮಲಾರಬೀಡು ಹಾಗೂ ಹಲವು ಜನ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿರುವರು.
ಸನ್ಮಾನ
ಶಾರದಾಂಬಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ದರ್ಖಾಸ್ತು, ಹರ್ಡಲ್ಸ್ ನಲ್ಲಿ ಗೋಲ್ಡ್ ಮೆಡಲ್ ವಿಜೇತ ಕಿಶನ್ ಡಿ ಯವರಿಗೆ ಸನ್ಮಾನ ನಡೆಯಲಿದೆ.
ಸಂಜೆ ಗಂಟೆ 3.00 ರಿಂದ ಸಾರ್ವಜನಿಕರಿಂದ ಮತ್ತು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನ ಕನಕಪುರ 65 ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 6.30 ರಿಂದ ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ.
ಅ.21 ರಂದು ಬೆಳಿಗ್ಗೆ ನಡೆಯುವ ಕ್ರೀಡಾಕೂಟವನ್ನು ದರ್ಖಾಸ್ತು ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬುಸಾಲಿ ಉದ್ಘಾಟಿಸಲಿದ್ದಾರೆ.
ಸಂಜೆ ಗಂಟೆ 4.00 ಕ್ಕೆ ಕುಣಿತ ಭಜನೆ ನಡೆಯಲಿದೆ.ಗಂಟೆ 6.00 ಕ್ಕೆ ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆ ನಡೆದು ಜಲಸ್ತಂಭನಾ ನಡೆಯಲಿದೆ.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.