













ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೆಳ್ಳಿ ಹಬ್ಬದ ಅಂಗವಾಗಿ ಮನೋವೈದ್ಯಕೀಯ ವಿಭಾಗದ ವತಿಯಿಂದ ನಶಾ ಮುಕ್ತ ಸಮಿತಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ–ಕರ್ನಾಟಕ ಚಾಪ್ಟರ್ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಅ. 9ರಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷರು ಹಾಗೂ ಕೆವಿಜಿಎಂಸಿಎಚ್ ನ ವೈದ್ಯಕೀಯ ನಿರ್ದೇಶಕರಾದ ಡಾ.ಕೆ.ವಿ.ಚಿದಾನಂದ ವಹಿಸಿ ಮಾತನಾಡಿ ” ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮಹತ್ವದ್ದಾಗಿದ್ದು, ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಸೂಕ್ತ ಸಮಯದಲ್ಲಿ ನೆರವು ಹಾಗೂ ಚಿಕಿತ್ಸೆ ಪಡೆಯಬೇಕು” ಎಂದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಪೂನಂ ಎಂ, ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಶ್ಮಿ ಕೆ, ಸೀನಿಯರ್ ರೆಸಿಡೆಂಟ್ ಡಾ. ಅಮೃತಾ ಅಜಯ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಶ್ಮಿ ಕೆ ಮತ್ತು ಡಾ. ಅಮೃತಾ ಅಜಯ್ ಭಾಗವಹಿಸಿದ್ದರು.
ಮಾನ್ಯ ಮತ್ತು ಬಳಗ ಪ್ರಾರ್ಥಿಸಿದರು. ಡಾ. ಪೂನಂ ಎಂ. ಸ್ವಾಗತಿಸಿ, ಕಂನ್ಸಲ್ಟೆಂಟ್ ಸೈಕಲಾಜಿಸ್ಟ್ ಸಯನಾ ಎಸ್. ಎನ್ ವಂದಿಸಿದರು. ಡಾ ಅಭಿಷ್ಣ ಹಾಗೂ ಡಾ ಅಖಿಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.







