ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಕೊಡುಗೆ

0

ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಸ್ಥಳೀಯ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಅ.8 ರಂದು ಹಲವು ಕೊಡುಗೆಗಳನ್ನು ನೀಡಲಾಯಿತು.

ಇದೀಗ ಪಾಕಶಾಲೆ ನಿರ್ಮಾಣದ ಬಗ್ಗೆ ₹2,57,000 ಹಾಗೂ ದೇವಸ್ಥಾನಕ್ಕೆ ಜನರೇಟರ್ ಮತ್ತು ಗ್ರೈಂಡರ್ ಪಾತ್ರಗಳಿಗಾಗಿ ₹ 2,50,000 ರೂಪಾಯಿ ನೀಡಲಾಯಿತು.

ಕಲಾವಿದ ಯಜ್ಞೇಶ್ ಆಚಾರ್ ಅವರ ಸಮ್ಮುಖದಲ್ಲಿ ಜನರೇಟರ್ ಹಾಗೂ ಪಾತ್ರ ಪರಿಕರಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಸದಸ್ಯರುಗಳು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರುಗಳು, ವರಮಹಾಲಕ್ಷ್ಮಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ ಹಾಗೂ ಸದಸ್ಯರುಗಳು,ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷ ಹಾಗು ಸದಸ್ಯರುಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸಿತರಿದ್ದರು.

ಇದೇ ಭಜನಾ ಮಂಡಳಿ ವತಿಯಿಂದ ಬಸವೇಶ್ವರ ಜೀರ್ಣೋದ್ಧಾರ ಸಮಯದಲ್ಲಿ ಗಣಪತಿ ಗುಡಿಯ ನಿರ್ಮಾಣಕ್ಕೆ ₹ 4,O1111, ದೇವಸ್ಥಾನದ ಒಳಾಂಗಣ ಶಾಶ್ವತ ಮೇಲ್ಚಾವಣಿಯ ಬಗ್ಗೆ ₹ 2,57000, ದೇವಸ್ಥಾನಕ್ಕೆ ಸೌಂಡ್ ಸಿಸ್ಟಮ್ ಬಗ್ಗೆ ₹ 43000, ದೇವಳದ ಜೀರ್ಣೋದ್ಧಾರ ಸಮಯ ಮಾಡಿದ ಸಾಲದ ಮರುಪಾವತಿ ಬಗ್ಗೆ ನಗರ ಭಜನೆ ಮಾಡಿ ನೀಡಿದ ಮೊತ್ತ ₹ 6,50,000 ಗಳಾಗಿವೆ.
ಈ ವರೆಗೆ ಒಟ್ಟಾಗಿ ರೂ. 18,58000 ಕೂ ಮಿಕ್ಕಿ ಕೊಡುಗೆಗಳನ್ನು ಶ್ರೀ ದೇವಳಕ್ಕೆ ನೀಡಲಾಗಿರುವುದಾಗಿ ತಿಳಿದು ಬಂದಿದೆ.