ಸಂಪಾಜೆ ಗ್ರಾಮದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

0

ದ. ಕ ಸಂಪಾಜೆ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಗುದ್ದಲಿ ಪೂಜೆಯನ್ನು ಅ. 10 ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ” ಸಂಪಾಜೆ – ಕಲ್ಲುಗುಂಡಿ ಗ್ರಾಮದ ಬಹು ಬೇಡಿಕೆಯ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿಗಳ ಕನಸು ನನಸಾಗಲಿದೆ. ಗ್ರಾಮಗಳ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗಳು ಅಭಿವೃದ್ಧಿ ಆದಷ್ಟು ಶೀಘ್ರವೇ ಪೂರ್ಣ ಗೊಳಿಸಲಿದ್ದೇವೆ. ಅಲ್ಲದೇ ರಸ್ತೆ ಕಾಮಗಾರಿ ಆರಂಭಗೊಂಡು ಮುಕ್ತಾಯವಾಗುವ ತನಕ ರಸ್ತೆಯ ನಿರ್ಮಾಣವನ್ನು ಸಂಬಂಧ ಪಟ್ಟವರು , ರಸ್ತೆಯ ಫಲಾನುಭವಿಗಳು ವೀಕ್ಷಿಸುವಂತಹ ಕಾರ್ಯವನ್ನು ಕೂಡಾ ಮಾಡಬೇಕು . ಅಲ್ಲದೇ ಮುಂದಿನ ದಿನಗಳಲ್ಲಿ
ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರದಿಂದ ಹೆಚ್ಚಿನ ಅನುದಾನ ತರಿಸುವ ಪ್ರಯತ್ನ ವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಸ್ತೆ ಕಾಮಗಾರಿಗಳ ವಿವರದಂತೆ ಸಂಪಾಜೆ ಗ್ರಾಮದ ಬೈಲೆ – ಬಸಳೆ ರಸ್ತೆ ರೂ.10 ಲಕ್ಷ , ನೆಲ್ಲಿಕುಮೇರಿ ಮೇಲೆ – ಕೀಲಾರು ರೂ. 10 ಲಕ್ಷ ಬಾಚಿಗದ್ದೆ – ಕೋಡಿ ಕೈಪಡ್ಕ ರಸ್ತೆ 5.50 ಲಕ್ಷ , ಕಲ್ಲುಗುಂಡಿ – ದಂಡೆಕಜೆ ರಸ್ತೆ ರೂ.10 ಲಕ್ಷ ದಲ್ಲಿ ನಿರ್ಮಾಣವಾಗಲಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಮಂಡಲ ನಿಕಟಪೂರ್ವ ಅಧ್ಯಕ್ಷ ಹರೀಶ್ ಕಂಜಿಪಿಲಿ , ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ , ಕಾರ್ಯದರ್ಶಿ ಸುರೇಶ್ ನಾಯ್ಕ, ಹಿರಿಯರಾದ ಜಗದೀಶ್ ಕೆ. ಪಿ , ಗಣಪತಿ ಭಟ್ , ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ ಉಳುವಾರು , ಯಶೋಧ ಲೋಕನಾಥ್ , ಸಂಪಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಪೇರಾಲು, ಪ್ರಕಾಶ್ ಕೆ. ಪಿ, ಪುನೀತ್ ದೊಡ್ಡಡ್ಕ, ರಾಘವ ಅಬೀರ, ಮನೋಜ್ ಜಿ.ಎಸ್ ಗೂನಡ್ಕ ,
ಶಾಜಿ ಮಾಧವನ್ , ಚಂದ್ರ ಶೇಖರ ಕೈಪಡ್ಕ, ನಾಗೇಶ್ ಕುಯಿಂ ತೋಡು , ಮಾಜಿ ಗ್ರಾ.ಪಂ ಸದಸ್ಯೆ ರಜನಿ ಶರತ್ , ರಮ್ಯ ಕೆ.ಆರ್ , ಚಂದ್ರಕಲಾ , ಸುನಿತಾ , ಲೋಕೇಶ್ ಬಾಚಿಗದ್ದೆ , ಅಭಿಷೇಕ್ ಕೈಪಡ್ಕ , ಮಿಥುನ್ , ಸಚಿನ್ ಕೀಲಾರು , ಯಶವಂತ ಮೊದಲಾದ ಕಾರ್ಯಕರ್ತರು , ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. .