ಅರಂತೋಡು ಬಳಿ ಕಾರು ಅಪಘಾತ: ಮಹಿಳೆಗೆ ಗಾಯ

0

ಸುಳ್ಯ ಆಸ್ಪತ್ರೆಗೆ ದಾಖಲು

ಅರಂತೋಡು ಸಮೀಪ ಕೊಡಂಕೇರಿ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತದಿಂದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಅ.೧೨ರಂದು ವರದಿಯಾಗಿದೆ.
ಮಡಿಕೇರಿ ನಿವಾಸಿ ರೇಖಾ ಗಾಯಗೊಂಡ ಮಹಿಳೆ. ಕಾರಿನಲ್ಲಿದ್ದ ಅವರ ಪತಿ ಬಿದ್ದಪ್ಪ ಹಾಗೂ ಮಗಳು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡ ರೇಖಾ ಅವರನ್ನು ಅರಂತೋಡಿನ ಸಮೃದ್ಧಿ ಆಂಬ್ಯುಲೆನ್ಸ್‌ನ ಶರತ್ ಅಡ್ಯಡ್ಕ ಅವರು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.