













ಕಳಂಜ ಗ್ರಾಮದ ಪುಂಡೂರು ದಿ. ಕೋಟೆ ಗೋಪಾಲಕೃಷ್ಣಯ್ಯನವರ ಪುತ್ರ ಕೆ. ನರಸಿಂಹಮೂರ್ತಿ ಯವರು ಅನಾರೋಗ್ಯದಿಂದ ಅ. 14ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು.
ಅವಿವಾಹಿತರಾಗಿದ್ದ ಇವರು ತಮ್ಮ ಸಹೋದರ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಸತ್ಯನಾರಾಯಣ ಕೋಟೆಯವರ ಮನೆಯಲ್ಲಿ ಪುತ್ತೂರಿನಲ್ಲಿ ನೆಲೆಸಿದ್ದರು. ಮೃತರು ಸಹೋದರರಾದ ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಕೋಟೆ, ಸತ್ಯನಾರಾಯಣ ಕೋಟೆ, ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಸೀತಾರಾಮ ಕೋಟೆ, ಸಹೋದರಿಯರಾದ ಶ್ರೀಮತಿ ಸೀತಾಲಕ್ಷ್ಮಿ ಕುಂಬಳೆ, ಶ್ರೀಮತಿ ಶಾರದೆ ಕನ್ಯಾನ ಸೇರಿದಂತೆ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಪುಂಡೂರು ನಡುಮನೆಯಲ್ಲಿ ನೆರವೇರಿಸಲಾಯಿತು.







