ಜಾಲ್ಸೂರು ಪ್ರಯಾಣಿಕರ ತಂಗುದಾಣದ ಮೇಲ್ಚಾವಣಿಯನ್ನು ಆವರಿಸಿರುವ ಜೇಡರ ಬಲೆ

0

ಪ್ರಯಾಣಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆಗಳಿದ್ದರೂ ಸುಚಿತ್ವದ ಕೊರತೆ

ಜಾಲ್ಸೂರು ಪೇಟೆಯ ಮಧ್ಯಭಾಗದಲ್ಲಿರುವ ಪ್ರಯಾಣಿಕರ ತಂಗುದಾಣದ ಒಳಭಾಗದ ಮೇಲ್ಚಾವಣಿಗೆ ಜೇಡರ ಬಲೆ ಆವರಿಸಿದ್ದು ಪ್ರಯಾಣಿಕರಿಗೆ ಕಿರಿಕಿರಿ ನೀಡುತ್ತಿದೆ. ಅಲ್ಲದೆ ಒಳಭಾಗದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಗಳು ಇದ್ದರೂ ಕೂಡ ಸುಚಿತ್ವದ ಕೊರತೆ ಎದ್ದು ಕಾಣುತ್ತಿದೆ.
ದಿನನಿತ್ಯ ನೂರಾರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಈ ತಂಗುಧಾಣದ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಪಕ್ಕದಲ್ಲಿ ಇರುವ ಗ್ರಾಮ ಪಂಚಾಯತ್ ನ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.