ಮಂಡೆಕೋಲಿನಲ್ಲಿ ನ.20ರಂದು ಸಹಕಾರ ಸಪ್ತಾಯ ಸಮಾರೋಪ ಸಮಾರಂಭ – ಸಿದ್ಧತೆಗೆ ಸಭೆ

0

ನ.1ರಂದು ಕ್ರೀಡಾಕೂಟ

ನ.20ರಂದು ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮವು ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಅದರ ಪೂರ್ವಭಾವಿ ಸಭೆಯು ಅ.16ರಂದು ಮಂಡೆಕೋಲಿನ ಅಮೃತ ಸಹಕಾರ ಭವನದದ ಸಭಾಂಗಣದಲ್ಲಿ ನಡೆಯಿತು.

ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿ ಸಿದ್ಧತೆಗಳ ಕುರಿತು ಮಾಹಿತಿ‌ ನೀಡಿದರು.‌ ನ.1ರಂದು ತಾಲೂಕಿನ ಸಹಕಾರ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳಿಗೆ, ನವೋದಯ ಸದಸ್ಯರಿಗೆ ಪೇರಾಲಿನಲ್ಲಿ ಕ್ರೀಡಾಕೂಟ ನಡೆಸುವ ಕುರಿತು ತಿಳಿಸಿದರು. ನ.20ರಂದು ಸಪ್ತಾಹ ಸಮಾರೋಪದ‌ ದಿನ ಮೆರವಣಿಗೆ, ಅಲಂಕಾರ, ಆಹಾರ, ಸಭೆ, ಸನ್ಮಾನ ಇತ್ಯಾದಿ ಸಿದ್ಧತೆ ಕುರಿತು ವಿವರ ನೀಡಿದರು.
ಮಂಡೆಕೋಲು ಸಹಕಾರ ಸಂಘದ ಉಪಾಧ್ಯಕ್ಷ
ಪುರುಷೋತ್ತಮ ಕಾಡುಸೊರಂಜ, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ರೈ ಪೇರಾಲುಗುತ್ತು, ಶಿವಪ್ರಸಾದ್ ಉಗ್ರಾಣಿಮನೆ, ಮಾಜಿ ಸಿ.ಇ.ಒ. ಅನಂತಕೃಷ್ಣ ಚಾಕೋಟೆ, ನಿರ್ದೇಶಕರುಗಳಾದ ರಾಜಣ್ಣ ಪೇರಾಲುಮೂಲೆ, ಲಕ್ಷ್ಮಣ ಉಗ್ರಾಣಿಮನೆ, ಆಶಿಕ್ ದೇವರಗುಂಡ, ತುಳಸಿನಿ ದೇವರಗುಂಡ, ಲಿಂಗಪ್ಪ ಬದಿಕಾನ, ಉಮೇಶ್ ಮೇಲ್ಮನೆ , ಸುಳ್ಯ ಸಿ.ಎ.ಬ್ಯಾಂಕ್ ಸಿ.ಇ.ಒ. ಸುದರ್ಶನ ಸೂರ್ತಿಲ, ಅರಂತೋಡು ಸೊಸೈಟಿ ಸಿ.ಇ.ಒ. ವಾಸುದೇವ ನಾಯಕ್ ಅಂಗಡಿಮಠ, ಊರಿನ ಪ್ರಮುಖರಾದ ಜನಾರ್ದನ ಬರೆಮೇಲು, ಬಾಲಚಂದ್ರ ದೇವರಗುಂಡ, ದಾಮೋದರ ಪಾತಿಕಲ್ಲು, ಸುರೇಶ್ ಚೌಟಾಜೆ, ಲೋಕೇಶ್ ಚೌಟಾಜೆ, ರಾಮಚಂದ್ರ ಕಣೆಮರಡ್ಕ, ಮುರಳೀಧರ ರೈ ಪೇರಾಲುಗುತ್ತು, ದಾಮೋದರ ಮಿತ್ತಪೇರಾಲು, ನಾರಾಯಣ ಕೆದ್ಕಾರ್, ಮಹೇಶ್ ಕುದ್ಕುಳಿ, ಮೋಹಿನಿ ಚಂದ್ರಶೇಖರ ಮಂಡೆಕೋಲು, ಪ್ರಕಾಶ್ ಕಣೆಮರಡ್ಕ, ಹರೀಶ್ ಕುಕ್ಕುಡೇಲು, ಪುಷ್ಪಾವತಿ ಮಂಡೆಕೋಲು, ಭಾಗೀರಥಿ ಮಾವಂಜಿ, ಪ್ರಿಯಾ ಸುರೇಶ್ ಕಣೆಮರಡ್ಕ, ನಾಗವೇಣಿ ಮಿತ್ತಪೇರಾಲು, ಲತಾ ಕೋರನ್, ಜಯಶ್ರೀ ಮಿತ್ತಪೇರಾಲು, ಎಲ್ಯಣ್ಣ ಗೌಡ ಕಾಯರ್ತೋಡಿ, ಪ್ರದೀಪ್ ತೋಟಪ್ಪಾಡಿ, ಪದ್ಮನಾಭ ಬಾಳೆಕೋಡಿ, ರತೀಶ್ ಪರಪ್ಪು, ಕಮಲ ಶಿವಣ್ಣ ಮಿಥಿಲ, ಶ್ರೀಕಾಂತ್ ಮಾವಂಜಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ.‌ ಸ್ವಾಗತಿಸಿದರು.