













ಹಾಸನದಿಂದ ಗೊಬ್ಬರ ಲೋಡ್ ತಂಡ ಗೂಡ್ಸ್ ವಾಹನದ ಚಾಲಕ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಅ.17ರಂದು ನಿಂತಿಲ್ಲಿನಿಂದ ವರದಿಯಾಗಿದೆ.
ನಿಂತಿಕಲ್ಲಿನ ಶ್ರೀದೇವಿ ಅಗ್ರಿಟೆಕ್ ಸಂಸ್ಥೆಗೆ ಹಾಸನದಿಂದ ಗೊಬ್ಬರದ ಲೋಡ್ ಬಂದಿತ್ತು. ಲಾರಿ ತಲುಪಿದ ಸ್ವಲ್ಪ ಸಮಯದಲ್ಲಿ ಚಾಲಕನಿಗೆ ನಡುಕ ಆರಂಭವಾಗಿ ಕುಸಿದರೆನ್ನಲಾಗಿದೆ. ವಿಷಯ ತಿಳಿದು ಅಂಗಡಿಯವರು ಹಾಗೂ ಕಾಂಪ್ಲೆಕ್ಸ್ ನವರು ಸೇರಿದರು. ಸ್ಥಳೀಯ ವೈದ್ಯರಿಗೆ ವಿಷಯ ತಿಳಿಸಿ ಅವರು ಸ್ಥಳಕ್ಕೆ ಬಂದರು.ಅವರ ಸಲಹೆಯ ಮೇರೆಗೆ ಜಮಾಲ್ ಮತ್ತು ಸಮಹಾದಿಯ ಪಿ.ಎಂ ಅಬ್ದುಲ್ ರಹಿಮಾನ್ ರವರು ಓಮ್ನಿಯಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಪುಣ್ಚತ್ತಾರು ತಲುಪಿದಾಗ
ಬಂದ ಅಂಬ್ಯುಲೆನ್ಸ್ ಗೆ ಚಾಲಕನನ್ನು ಶಿಫ್ಟ್ ಮಾಡಿ ಕಾಣಿಯೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆ ವೇಳೆಗಾಗಲೇ ಚಾಲಕ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.







