ಸುಳ್ಯದಲ್ಲಿ ಶಂಕರ ಬಿಲ್ಡ್ ಟೆಕ್‌ ನೂತನ ಕಚೇರಿಯ ಉದ್ಘಾಟನೆ

0

ಸಿವಿಲ್‌ ಇಂಜಿನಿಯರ್‌ ಕೃಷ್ಣ ಸುಹಾಸ್‌ ಮಾಲಕತ್ವದ ಶಂಕರ ಬಿಲ್ಡ್‌ ಟೆಕ್‌ ನ ನೂತನ ಕಚೇರಿಯು ಸುಳ್ಯ ತಾಲೂಕು ಪಂಚಾಯತ್‌ ಎದುರಿನ ಕರೋಡಿ ಕಾಂಪ್ಲೆಕ್ಸ್‌ ನಲ್ಲಿ ಶುಭಾರಂಭಗೊಂಡಿತು.

ಕುಟುಂಬಸ್ಥರು, ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ಕೆ. ಗಣೇಶ ಶರ್ಮ, ಡಾ. ರಾಮ ಮೋಹನ್‌, ಎ.ಎಂ. ಭಟ್‌, ನಿವೃತ್ತ ಪ್ರಾಂಶುಪಾಲ ಕೆ. ಕೊಡೆಂಕಿರಿ ಬಾಲಕೃಷ್ಣ ಭಟ್‌ ಹಾಗೂ ಪುರೋಹಿತ ಸುಶಿತ್ ಉದ್ಘಾಟನೆ ನೆರವೇರಿಸಿದರು.

ಕೃಷ್ಣ ಸುಹಾಸ್‌ ರವರು ಸಿವಿಲ್‌ ಇಂಜಿನಿಯರ್‌ ರಾಗಿ ಉತ್ತಮ ಹೆಸರು ಪಡೆದಿದ್ದಾರೆ. ಅವರ ಹೊಸ ಕಚೇರಿಯ ಮೂಲಕ ಅವರ ವೃತ್ತಿ ಜೀವನ ಇನ್ನಷ್ಟು ಯಶಸ್ವಿಯಾಗಲಿ. ಈ ಕಚೇರಿಯ ಮೂಲಕ ಸಿವಿಲ್‌ ಇಂಜಿನಿಯರ್‌ ಕೆಲಸಗಳು ಮತ್ತು ಸೇವೆಗಳು ಸಮಾಜಕ್ಕೆ ಉತ್ತಮ ರೀತಿಯಲ್ಲಿ ದೊರೆಯಲಿ. ಜನರ ಪೂರ್ಣ ಸಹಕಾರ ಅವರಿಗೆ ಸಿಗಲಿ ಎಂದು ಅತಿಥಿಗಳು ಶುಭ ಹಾರೈಸಿದರು.

ಕೆ.ಶಿವಪ್ರಸಾದ್‌ ಸಂದರ್ಭೋಚಿತವಾಗಿ ಮಾತನಾಡಿದರು. ಕೃಷ್ಣ ಸುಹಾಸ್‌ ಸ್ವಾಗತಿಸಿ ವಂದಿಸಿದರು.