ಹಗ್ಗಜಗ್ಗಾಟ : ಶಿವಾಜಿ ಫ್ರೆಂಡ್ಸ್ ದುಗಲಡ್ಕ ಬಿ, ಪಾಂಚಜನ್ಯ ಗುತ್ತಿಗಾರು ಪ್ರಥಮ
ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ – ಚಣಿಲ ಗುತ್ತಿಗಾರು ಇಲ್ಲಿ ದಸರಾ ಪ್ರಯುಕ್ತ ಅ.15 ರಂದು ದುರ್ಗಾಪೂಜೆ, ಹಗಜಗ್ಗಾಟ ನಡೆಯಿತು.















ಪೂರ್ವಾಹ್ನ ಗಣಪತಿ ಹವನ ನಡೆಯಿತು. ಸಂಜೆ ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಮತ್ತು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ಸಮಿತಿ ವಳಲಂಬೆ ವತಿಯಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ ದುರ್ಗಾ ಪೂಜೆ ನಡೆದು ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ. 16 ರ ಬೆಳಿಗ್ಗೆ ಆಯುಧ ಪೂಜೆ ನಡೆಯಿತು.
ಹಗ್ಗಜಗ್ಗಾಟ ಪಂದ್ಯಾಟ
ಅಂದು ಸಾರ್ವಜನಿಕ ಪರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ನಡೆದಿದ್ದು ಹಗ್ಗಜಗ್ಗಾಜದಲ್ಲಿ ಪ್ರಥಮ ಸ್ಥಾನವನ್ನು ಶಿವಾಜಿ ಫ್ರೆಂಡ್ಸ್ ದುಗಲಡ್ಕ ಬಿ ಪಡೆದು, ದ್ವಿತೀಯ ಸ್ಥಾನವನ್ನು ಶಿವಾಜಿ ಫ್ರೆಂಡ್ಸ್ ದುಗಲಡ್ಕ ಎ ಪಡೆಯಿತು.
ತೃತೀಯ ಸ್ಥಾನವನ್ನು ಬೆರಿಪದವು
ಹಾಗೂ ಚತುರ್ಥ ಸ್ಥಾನವನ್ನು ಬ್ರದರ್ಸ್ ಕಂದಡ್ಕ ಪಡೆದರು.
ಶಿಸ್ತುಬದ್ದ ತಂಡವಾಗಿ ಸಿಂಧೂರ ಪುತ್ತೂರು ಮೂಡಿಬಂತು.
ಮಹಿಳೆಯರ ವಿಭಾಗದಲ್ಲಿ ಪಾಂಚಜನ್ಯ ಗುತ್ತಿಗಾರು ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನವನ್ನು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಪಡೆಯಿತು. ಮಹಿಳೆಯರ
ಶಿಸ್ತುಬಧ್ದ ತಂಡವಾಗಿ
ಮಯೂರಿ ಯುವತಿ ಮಂಡಲ ಚೊಕ್ಕಾಡಿ ಪ್ರಶಸ್ತಿ ಪಡೆಯಿತು.
ಬಹುಮಾನ ವಿತರಣಾ ಸಂದರ್ಭ
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಮುತ್ಲಾಜೆ, ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಚಣಿಲ ಮತ್ತಿತರರು ಉಪಸ್ಥಿತರಿದ್ದರು.







