ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಹೋಮ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮವು ಅ.16 ರಂದು ನಡೆಯಿತು.


ಬೆಳಿಗ್ಗೆ ದೇವತಾ ಪ್ರಾರ್ಥನೆ,ಸ್ವಸ್ತಿ ಪುಣ್ಯಾಹ ವಾಚನ,ಚಂಡಿಕಾ ಹೋಮ ಪ್ರಾರಂಭವಾಯಿತು.
ಮಧ್ಯಾಹ್ನ ಚಂಡಿಕಾಹೋಮದ ಪೂರ್ಣಾಹುತಿ,ಸುಮಂಗಲೀ ಆರಾಧನೆ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ವ್ಯ.ಸ. ಸದಸ್ಯರಾದ ಶಿವರಾಮ ಗೌಡ ನೆಕ್ರೆಪ್ಪಾಡಿ,ರಾಧಾಕೃಷ್ಣ ಚಾಕೋಟೆ,ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್ ,ಮುರಳೀಧರ ಕೊಚ್ಚಿ,ಶ್ರೀಮತಿ ಆಶಾ ಮಡ್ತಿಲ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ನೂರಾರು ಜನ ಭಕ್ತಾದಿಗಳು, ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.